ಬೆಂಗಳೂರು: ಕೊರೊನಾ ಎಫೆಕ್ಟ್ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇದರಿಂದ ಕೇವಲ ಜನ ಜೀವನದ ಮೇಲಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳ ಮೇಲೆಯೂ ಎಫೆಕ್ಟ್ಆಗಿದೆ.
ಹೌದು ಕಳೆದ ಒಂದು ವಾರದಿಂದ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಪೆಟ್ ಶಾಪ್ಗಳು ಬಂದ್ ಆಗಿವೆ. ಹೀಗಾಗಿ ಕೆಲವು ಪೆಟ್ ಶಾಪ್ಗಳ ಮಾಲೀಕರು ಪೆಟ್ ಶಾಪ್ಗಳನ್ನು ಬಂದ್ ಮಾಡಿಕೊಂಡು ಹೋಗಿರುವ ಪರಿಣಾಮ ಅನೇಕ ಪ್ರಾಣಿ, ಪಕ್ಷಿಗಳು ಆಹಾರ, ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿವೆ.
ಈ ನಿಟ್ಟಿನಲ್ಲಿ ಇಂದು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಅಧಿಕಾರಿಗಳು ನಗರದ ಕೆಲ ಪ್ರಾಣಿ ದಯಾ ಸಂಘಗಳ ಜೊತೆಗೂಡಿ ಹಲವು ಪೆಟ್ ಶಾಪ್ಗಳ ಮೇಲೆ ದಾಳಿ ನಡೆಸಿವೆ.
ಅಂಗಡಿಗಳಲ್ಲೇ ಬಂಧಿಯಾಗಿದ್ದ ಪ್ರಾಣಿ ಪಕ್ಷಿಗಳ ರಕ್ಷಣೆ ಈ ದಾಳಿ ವೇಳೆ ಪ್ರಾಣಿ, ಪಕ್ಷಿಗಳು ಆಹಾರ, ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಿಷಯ ಕಂಡು ಅಧಿಕಾರಿಗಳು ದಂಗಾಗಿದ್ದಾರೆ. ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾನಂದ್ ಡಂಬಳ್, ಕಳೆದ ಮೂರು ದಿನಗಳಿಂದ ಈ ದಾಳಿಯನ್ನು ಮುಂದುವರೆಸಿದ್ದು, ಇಂದು ಬೆಂಗಳೂರು ದಕ್ಷಿಣ ಭಾಗದ ಅನೇಕ ಪೆಟ್ ಶಾಪ್ಗಳ ಸ್ಥಿತಿಗತಿಗಳನ್ನ ಪರಿಶೀಲಿಸಿದರು.
ಅಂಗಡಿಗಳಲ್ಲೇ ಬಂಧಿಯಾಗಿದ್ದ ಪ್ರಾಣಿ ಪಕ್ಷಿಗಳು ಈ ವೇಳೆ ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ವಾಸ್ತವ ಸ್ಥಿತಿ ಅಧಿಕಾರಿಗಳ ಗಮನಕ್ಕೆ ಬಂದಿತು. ಹಲವು ಶಾಪ್ಗಳು ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಿಗೆ ಪಡೆಯದೆ ರಾಜಾ ರೋಷವಾಗಿ ಪ್ರಾಣಿ ಪಕ್ಷಿಗಳನ್ನ ಹಿಡಿದು ಹಾಕಿರುವುದು, ಹಾಗೂ ಮಾರಾಟ ಮಾಡುತ್ತಿರುವುದು ಈ ದಾಳಿಯ ವೇಳೆ ಬಹಿರಂಗವಾಗಿದೆ. ಈ ಎಲ್ಲಾ ಅಂಗಡಿ ಮಾಲೀಕರುಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿಗಳಲ್ಲೇ ಬಂಧಿಯಾಗಿದ್ದ ಪ್ರಾಣಿ ಪಕ್ಷಿಗಳು ಇನ್ನು ಈ ದಾಳಿ ವೇಳೆ ಅಲಸೂರನಲ್ಲಿನ ಪೆಟ್ ಶಾಪ್ ಒಂದರಲ್ಲಿ ಪ್ರಾಣಿ, ಪಕ್ಷಿಗಳು ತೀರಾ ದಯನೀಯ ಸ್ಥಿತಿಯಲ್ಲಿದ್ದದ್ದು ಕಂಡು ಬಂದಿತು. ಕಳೆದ ಮೂರ್ನಾಲ್ಕು ದಿನಗಳಿಂದ ಆಹಾರ ಇಲ್ಲದೇ ಒಳಗಡೆಯೇ ಪರದಾಡುತ್ತಿದ್ದ ಕರುಣಾಜನಕ ನೋಟ ಮನಕಲಕುವಂತಿತ್ತು. ಅದಾಗಲೇ ಅಲ್ಲಿ ಎರಡು ಮೊಲಗಳು ಪ್ರಾಣ ಬಿಟ್ಟಿದ್ದು, ದೇಹ ಕೊಳೆತು ದುರ್ನಾತ ಹರಡಿತ್ತು. ಮಾಲೀಕರು ಕಳೆದ ಕೆಲ ದಿನಗಳಿಂದ ಶಾಪ್ ತೆರೆದೇ ಇಲ್ಲ ಎಂಬುದು ಅಲ್ಲಿನ ಸ್ಥಿತಿಯಿಂದ ಸ್ಪಷ್ಟವಾಗಿ ಮನವರಿಕೆಯಾಗುತ್ತಿತ್ತು. ಈ ವೇಳೆ ಶಾಪ್ನ ಮಾಲೀಕರಿಗೆ ವಾರ್ನ್ ಮಾಡಿದ ಶಿವಾನಂದ ಡಂಬಳ್ ಪ್ರಾಣಿ, ಪಕ್ಷಿಗಳನ್ನ ಅಲ್ಲಿಂದ ಬಿಡುಗಡೆಗೊಳಿಸಿ, ಅವುಗಳನ್ನು ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದರು.