ಕರ್ನಾಟಕ

karnataka

ETV Bharat / state

ಮೂಕ ಪ್ರಾಣಿಗಳ ಹಸಿವಿಗೆ ಕರಗುತಿದೆ ಪ್ರಾಣಿಪ್ರಿಯರ ಮನ

ಕೊರೊನಾದಿಂದ ಕಂಗೆಟ್ಟಿದ್ದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದವರು ಈಗ ಲಾಕ್​ಡೌನ್​ನಿಂದ ಮನೆಯಿಂದ ಹೊರಬಾರದ ಸ್ಥಿತಿಯಲ್ಲಿದ್ದಾರೆ. ಮೂಕ ಪ್ರಾಣಿಗಳ ಹಸಿವಿನ ನೋವನ್ನು ಅರ್ಥೈಸಿಕೊಳ್ತಿರುವ ಕೆಲ ಪ್ರಾಣಿಪ್ರಿಯರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

animal lovers distributed food for street dogs in Bengalore by
ಕೊರೊನಾದಿಂದ ಕಂಗೆಟ್ಟಿದ್ದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರೀಯರು

By

Published : Mar 27, 2020, 12:05 PM IST

ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್​ಡೌನ್ ಆಗಿದೆ. ಹೀಗಾಗಿ ಅಂಗಡಿ ಮುಂಗಟ್ಟುಗಳೆಲ್ಲವೂ ಬಂದ್ ಆಗಿವೆ. ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳ ಮುಂದೆ ಆಹಾರಕ್ಕಾಗಿ ಅವಲಂಬಿತವಾಗಿದ್ದ ನಾಯಿಗಳು ಹಸಿವಿನಿಂದ ಬಳಲುವಂತಾಗಿದೆ.

ಕೊರೊನಾದಿಂದ ಕಂಗೆಟ್ಟಿದ್ದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಪ್ರಾಣಿಪ್ರಿಯರು

ಬೀದಿಯಲ್ಲಿರುವ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದವರು ಈಗ ಲಾಕ್​ಡೌನ್​ನಿಂದ ಮನೆಯಿಂದ ಹೊರಬಾರದ ಸ್ಥಿತಿಯಲ್ಲಿದ್ದಾರೆ. ಮೂಕ ಪ್ರಾಣಿಗಳ ಹಸಿವಿನ ನೋವು ಅರ್ಥಮಾಡಿಕೊಂಡಿರುವ ಕೆಲ ಪ್ರಾಣಿಪ್ರಿಯರು ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಬೀದಿ ಬದಿಯ ಪ್ರಾಣಿಗಳಿಗೆ ಅನ್ನಾಹಾರ ನೀಡುವ ಕೆಲಸ ಮಾಡಲಾಗ್ತಿದೆ. ಯಶವಂತಪುರ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ,ಕಬ್ಬನ್ ಪಾರ್ಕ್, ವಿಧಾನಸೌಧ ಬಳಿ ಹೋಗಿ ಆಹಾರ ನೀಡಿದ್ದಾರೆ.

ABOUT THE AUTHOR

...view details