ಬೆಂಗಳೂರು : ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ವೈಫ್ ಸ್ವಾಪಿಂಗ್ (ಹೆಂಡತಿಯನ್ನು ಅದಲು ಬದಲು ಮಾಡುವುದು) ಮಾಡಿದ್ದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಈ ಕರಿನೆರಳಿನ ಸಂಸ್ಕೃತಿ ಛಾಯೆ ಬೆಂಗಳೂರಿಗೂ ಹಿಂದೆ ತಟ್ಟಿತ್ತು. ಇದೀಗ ಮತ್ತೆ ವೈಫ್ ಸ್ವಾಪಿಂಗ್ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈಫ್ ಸ್ವಾಪಿಂಗ್ಗೆ ಬಲವಂತ ಪಡಿಸಿರುವುದಲ್ಲದೇ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ ಗಂಡ ಹಾಗೂ ಆತನ ಮನೆಯವರು ಸೇರಿದಂತೆ ಒಟ್ಟು 10 ಮಂದಿ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವರದಕ್ಷಿಣೆ ತಡೆ ಕಾಯ್ದೆ, ಲೈಂಗಿಕ ದೌರ್ಜನ್ಯ ಸೇರಿ ವಿವಿಧ ಐಪಿಸಿ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
23 ವರ್ಷದ ಸಂತ್ರಸ್ತೆ ಕಳೆದ ವರ್ಷ ಡಿಸೆಂಬರ್ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಜೊತೆ ಮದುವೆಯಾಗಿತ್ತು. ಹಿಂದೂ ಸಂಪ್ರದಾಯದಂತೆ ಗುರು - ಹಿರಿಯರ ಸಮ್ಮುಖದಲ್ಲಿ ಯುವತಿಯ ಪೋಷಕರು ಮದುವೆ ಮಾಡಿ ಕೊಟ್ಟಿದ್ದರು. ಮಾತುಕತೆಯಂತೆ 2 ಲಕ್ಷ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನ ವರದಕ್ಷಿಣೆ ರೂಪವಾಗಿ ಕೊಟ್ಟಿದ್ದರು. ಮದುವೆ ಬಳಿಕ ಆರಂಭ ಎಲ್ಲವೂ ಸರಿಯಾಗಿತ್ತು. ಕಾಲ ಕ್ರಮೇಣ ನೀಡಲಾಗಿದ್ದ ಚಿನ್ನಾಭರಣದ ಗುಣಮಟ್ಟ ಸರಿಯಿಲ್ಲ ಎಂದು ಪತಿ ಮನೆಯವರು ಕ್ಯಾತೆ ತೆಗೆದು ಕಿರುಕುಳ ನೀಡಿದ್ದರು.