ಕರ್ನಾಟಕ

karnataka

ETV Bharat / state

ಬೆಂಗಳೂರಿನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ವಂಚನೆ ಆರೋಪ.. ದೂರು ದಾಖಲು - Shushruti Cooperative Bank fraud case

ವಿಲ್ಸನ್ ಗಾರ್ಡನ್‌ನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

fraud case registered against Shushruti Cooperative Bank
ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಂಚನೆ

By

Published : Sep 3, 2022, 10:36 AM IST

ಬೆಂಗಳೂರು: ಅಧಿಕ ಬಡ್ಡಿ ಆಮಿಷವೊಡ್ಡಿ ಗ್ರಾಹಕರಿಗೆ ವಂಚಿಸಿರುವ ಆರೋಪದಡಿ ವಿಲ್ಸನ್ ಗಾರ್ಡನ್‌ನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಗ್ರಾಹಕರ ಹೂಡಿಕೆ ಹಣ ಹಿಂದಿರುಗಿಸದ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಹಾಗೂ ರಾಜಗೋಪಾಲನಗರ ಠಾಣೆಯಲ್ಲಿ ಬ್ಯಾಂಕ್ ಚೇರ್ ಮನ್ ಶ್ರೀನಿವಾಸ್ ಮೂರ್ತಿ, ಪತ್ನಿ ಧಾರಿಣಿದೇವಿ, ಮಗಳು ಮೋಕ್ಷತಾರ ಹಾಗೂ ನಿರ್ದೇಶಕ ರತ್ನಂ ವಿರುದ್ಧ ಪ್ರತ್ಯೇಕ ದೂರುಗಳು ದಾಖಲಾಗಿವೆ.

ವಿಲ್ಸನ್ ಗಾರ್ಡನ್, ಪೀಣ್ಯಾ, ಚಿಕ್ಕಲಸಂದ್ರ, ರಾಜಗೋಪಾಲನಗರದಲ್ಲಿ ತನ್ನ ಶಾಖೆ ಹೊಂದಿರೋ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ಬೇರೆ ಬ್ಯಾಂಕ್​ಗಳಿಗಿಂತ ಹೆಚ್ಚಿನ ಬಡ್ಡಿ ನೀಡೋದಾಗಿ ಆಮಿಷವೊಡ್ಡಿ ನೂರಾರು ಜನರಿಂದ ಹಣ ಪಡೆದಿತ್ತು. ಬಹುತೇಕ ನಿವೃತ್ತ ನೌಕರರು, ಹಿರಿಯ ನಾಗರೀಕರು ಹೂಡಿಕೆ ಮಾಡಿದ್ದರು. ಮೊದಮೊದಲು ವಾರ್ಷಿಕ ಶೇ.9ರಷ್ಟು ಬಡ್ಡಿ ನೀಡ್ತಿದ್ದ ಬ್ಯಾಂಕ್ ನಂತರ ಶೇ.4ರಷ್ಟು ಬಡ್ಡಿ ನೀಡಲು ಆರಂಭಿಸಿತ್ತು. ಇದರಿಂದಾಗಿ ಬೇಸತ್ತ ಗ್ರಾಹಕರು ತಮ್ಮ ಡೆಪಾಸಿಟ್ ಹಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಆದರೆ ಹಣ ಹಿಂದಿರುಗಿಸದೇ ಗ್ರಾಹಕರಿಗೆ ಧಮ್ಕಿ ಹಾಕುತ್ತಿರುವ ಆರೋಪ ಬ್ಯಾಂಕ್‌ನವರ ವಿರುದ್ಧ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ:ಕೆಪಿಟಿಸಿಎಲ್ ಪರೀಕ್ಷಾ ಅಕ್ರಮದ ಹುಬ್ಬಳ್ಳಿಯಲ್ಲಿ ಕಿಂಗ್‌ಪಿನ್‌ ಅರೆಸ್ಟ್

ABOUT THE AUTHOR

...view details