ಕರ್ನಾಟಕ

karnataka

ETV Bharat / state

ಕೊರೊನಾ ರೂಪಾಂತರ ವೈರಸ್​​​​​​​​​​​​​ ಹಿನ್ನೆಲೆಯಲ್ಲಿ ನೈಟ್​ ಕರ್ಫ್ಯೂ.. ನಾವ್​ ಮೂವರೂ ಅಣ್ಣ-ತಮ್ಮಂದಿರು ಎಂದ ಸುಧಾಕರ್​

ರಾತ್ರಿ ಕರ್ಫ್ಯೂ ಮರುಪರಿಶೀಲನೆ ಕುರಿತು ಮುಖ್ಯಮಂತ್ರಿಗಳ ಜೊತೆ ಯಾವುದೇ ಚರ್ಚೆ ನಡೆದಿಲ್ಲ. ಇಂದು ರಾತ್ರಿಯಿಂದ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

No discussion about night curfew, No discussion about night curfew with CM Yediyurappa, Minister Sudhakar, Minister Sudhakar news, Minister Sudhakar night curfew news, ರಾತ್ರಿ ಕರ್ಫ್ಯೂ ಬಗ್ಗೆ ಮತ್ತೆ ಚರ್ಚೆ ನಡೆದಿಲ್ಲ, ಸಿಎಂ ಯಡಿಯೂರಪ್ಪ ಜೊತೆ ರಾತ್ರಿ ಕರ್ಫ್ಯೂ ಬಗ್ಗೆ ಮತ್ತೆ ಚರ್ಚೆ ನಡೆದಿಲ್ಲ, ಸಚಿವ ಸುಧಾಕರ್​, ಸಚಿವ ಸುಧಾಕರ್ ಸುದ್ದಿ, ರಾತ್ರಿ ಕರ್ಫ್ಯೂ ಬಗ್ಗೆ ಸಚಿವ ಸುಧಾಕರ್​ ಸುದ್ದಿ,
ನಾವ್​ ಮೂವರು ಅಣ್ತಂದಿರು ಎಂದ ಸುಧಾಕರ್​

By

Published : Dec 24, 2020, 2:43 PM IST

ಬೆಂಗಳೂರು: ಪಬ್ಬು, ಬಾರ್​ಗಳಲ್ಲಿ ಪಾರ್ಟಿಯಂತಹ ಚಟುವಟಿಕೆಯಿಂದ ಕೊರೊನಾ ರೂಪಾಂತರ ವೈರಾಣು ಹರಡುವ ಸಾಧ್ಯತೆ ತಡೆಯಲು ನೈಟ್ ಕರ್ಫ್ಯೂ ಜಾರಿ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಸುಧಾಕರ್​ ಹೇಳಿದ್ದಾರೆ.

ಆರೋಗ್ಯ ಸಚಿವ ಡಾ.ಸುಧಾಕರ್

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನೈಟ್ ಕರ್ಫ್ಯೂ ಮರುಪರಿಶೀಲನೆ ಬಗ್ಗೆ ಸಿಎಂ ಜೊತ ಯಾವುದೇ ಚರ್ಚೆಯಾಗಿಲ್ಲ. ಕೇವಲ ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಬಗ್ಗೆ ಚರ್ಚೆಯಾಗಿದೆ. ರಾತ್ರಿ ಕರ್ಫ್ಯೂ ಬಗ್ಗೆ ಯಾವುದೇ ಗೊಂದಲ ಇಲ್ಲ. ಪೊಲೀಸರಿಗೂ ಕೂಡ ಸೂಚನೆ ನೀಡಲಾಗಿದೆ. ಸಂಚಾರ ವ್ಯವಸ್ಥೆಗೆ ಯಾವುದೇ ರೀತಿಯ ಅಡೆತಡೆ ಇರುವುದಿಲ್ಲ ಎಂದರು.

ಕೆಲ ಪಬ್ಬು, ಬಾರ್​ಗಳಲ್ಲಿ ಬಹಳ ಜನ ಸೇರುವ ನಿರೀಕ್ಷೆ ಇದೆ. ಹಬ್ಬಗಳು ಹಾಗೂ ಹೊಸ ವರ್ಷದ ಹಿನ್ನೆಲೆ ಬಹಳ ಜನ ಸೇರಿ ಮತ್ತೆ ಹೊಸದಾಗಿ ಬ್ರಿಟನ್​ನಿಂದ ಬಂದವರ ಮೂಲಕ ಪಾರ್ಟಿಗಳಿಗೆ ತಲುಪಬಹುದು. ರೂಪಾಂತರ ವೈರಾಣು ಹರಡುವಿಕೆ ಕೋವಿಡ್-19 ಗಿಂತ ಶೇ. 70ರಷ್ಟು ಜಾಸ್ತಿ ಇದೆ. ಹಾಗಾಗಿ ಬಹಳ ಬೇಗ ಹರಡಿದರೆ ಸಮಸ್ಯೆಯಾಗಲಿದೆ ಎಂದರು.

ನಾವು ಇನ್ನೂ ಲಸಿಕೆಯನ್ನು ಪಡೆದಿಲ್ಲ. ಜನವರಿಯಲ್ಲಿ ಬರಬಹುದೆಂದು ಎದುರು ನೋಡುತ್ತಿದ್ದೇವೆ. ಅಲ್ಲಿಯವರೆಗೂ ಪರಿಸ್ಥಿತಿ ನಿಯಂತ್ರಣದಲ್ಲಿಡಬೇಕು. ಎಲ್ಲರೂ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಈಗ ಕರ್ಫ್ಯೂ ವಿಧಿಸಿರುವ ಸಮಯದಲ್ಲಿ ಯಾವುದೇ ರೀತಿಯ ಸಹಜ ಚಟುವಟಿಕೆ ಇರುವುದಿಲ್ಲ. ಜನರಿಗೆ ಅದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದರು.

ಸಚಿವರ ನಡುವೆ ಸಮನ್ವಯತೆ ಇಲ್ಲ ಎಂದು ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಆದರೆ ನಾವೆಲ್ಲರೂ ಕೂಡ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ. ನಾನು ಸುರೇಶ್ ಕುಮಾರ್, ಲಕ್ಷ್ಮಣ ಸವದಿ ಸಹೋದರರಂತೆ ಇದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ನಾವೆಲ್ಲರೂ ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಮಕ್ಕಳ ಭವಿಷ್ಯ ಅವರ ಆರೋಗ್ಯ ಎಷ್ಟು ಮುಖ್ಯವೋ ಅವರ ಶೈಕ್ಷಣಿಕ ಭವಿಷ್ಯ ರೂಪಿಸುವುದು ಕೂಡ ಅಷ್ಟೇ ಮುಖ್ಯ ಎನ್ನುವುದು ನಮ್ಮ ಅಭಿಪ್ರಾಯ. ನಮಗಿರುವ ಮಾಹಿತಿ ಹಾಗೂ ತಾಂತ್ರಿಕ ಸಮಿತಿ ನೀಡಿರುವ ಸಲಹೆಗಳ ಆಧಾರದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಸೇರಿದ್ದರು. ಅದರಂತೆ ನಾವು ಶಾಲೆಗಳ ಆರಂಭಕ್ಕೆ ನಿರ್ಧಾರ ಮಾಡಿದ್ದೇವೆ. ಹಂತ ಹಂತವಾಗಿ ಎಲ್ಲವನ್ನು ಮಾಡಲು ನಾವು ತಯಾರಿದ್ದೇವೆ ಎಂದರು.

ರೂಪಾಂತರ ವೈರಾಣು ಭೀತಿ ಎದುರಾಗಿರುವ ಹಿನ್ನೆಲೆ ಮತ್ತೊಮ್ಮೆ ನಾವು ತಿಂಗಳ ಅಂತ್ಯಕ್ಕೆ ಸಭೆ ಸೇರಲಿದ್ದೇವೆ. ಹೊಸ ವೈರಾಣುವಿನಿಂದ ಏನಾದರೂ ಸಮಸ್ಯೆಯಾಗಲಿದೆಯಾ ಎಂದು ಪರಿಶೀಲಿಸುತ್ತವೆ. ಏನೂ ತೊಂದರೆಯಾಗುವುದಿಲ್ಲ ಎಂದು ಕಂಡು ಬಂದರೆ ಶಾಲಾ ಕಾಲೇಜುಗಳು ಈಗ ನಿಗದಿಯಾದ ವೇಳಾಪಟ್ಟಿಯಂತೆ ಆರಂಭವಾಗಲಿದೆ ಎಂದರು.

ಡಿಕೆ ಸುರೇಶ್ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಅವರ ಹಿನ್ನೆಲೆ ಏನು ಎಂದು ನಾನು ಹೇಳುವುದಿಲ್ಲ. ಅವರ ರೀತಿಯಲ್ಲಿ ನಾನು ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಅವರ ಹಿನ್ನೆಲೆ ಏನು ಎನ್ನುವುದನ್ನು ಅವರು ಅವಲೋಕಿಸಬೇಕು. ಅವರ ಬಗ್ಗೆ ಎಲ್ಲ ಜನರಿಗೆ ಗೊತ್ತಿದೆ. ಅವರು ಬಳಸಿರುವ ಪದಗಳು ಅವರ ಅಭಿರುಚಿ, ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದಕ್ಕಿಂತ ಹೆಚ್ಚೇನೂ ಹೇಳುವುದಿಲ್ಲ ಎಂದರು.

ABOUT THE AUTHOR

...view details