ಬೆಂಗಳೂರು :ಸಿಡಿ ಪ್ರಕರಣ ಸಂಬಂಧ ಯುವತಿ ಪರವಾಗಿ ವಕೀಲ ಜಗದೀಶ್ ಎಂಬುವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.
ಯುವತಿ ಪರ ದೂರು ನೀಡಿದ ವಕೀಲ ಜಗದೀಶ್ ಹೀಗಂತಾರೆ.. ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅವರು ದೂರು ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ, ಎಸ್ಐಟಿ ಭದ್ರತೆ ಕೊಡಬೇಕೆಂದು ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಪರ ಮಾಜಿ ಶಾಸಕ ನಾಗರಾಜ್ ದೂರು ನೀಡಿದ್ದರು. ಆಕೆ ಭಯದಿಂದ ಹೊರ ಬರುತ್ತಿಲ್ಲ. ಲಿಖಿತ ರೂಪದಲ್ಲಿರುವ ಆಕೆಯ ದೂರನ್ನು ಪೊಲೀಸ್ ಆಯುಕ್ತರಿಗೆ ನೀಡಿದ್ದೇವೆ ಎಂದರು.
ನಿರ್ಭಯಾ ಕೇಸ್ ಗೈಡ್‌ಲೈನ್ಸ್ ಮಾದರಿ ಸ್ವಯಂಪ್ರೇರಿತ ದೂರು ದಾಖಲಿಸಲು ಮನವಿ ಮಾಡಿದ್ದೆವು. ಆದರೆ, ವಿಡಿಯೋ ಫೇಕ್ ಆಗಿದ್ದರೆ ಸಮಸ್ಯೆ ಆಗುತ್ತದೆ. ಹೀಗಾಗಿ, ದೂರು ನೀಡಿದ್ದೇವೆ ಎಂದರು.
ಇದನ್ನೂ ಓದಿ:ಸಿಡಿ ಪ್ರಕರಣದ ಯುವತಿ ಪರ ವಕೀಲರಿಂದ ಪೊಲೀಸರಿಗೆ ದೂರು: ಇಲ್ಲಿದೆ ದೂರಿನಲ್ಲಿರುವ ಸಂಪೂರ್ಣ ವಿವರ..
ಕಿಡ್ನ್ಯಾಪ್ ಕೇಸ್ ಸಂಬಂಧ ಅವರು ಪೋಷಕರು ನೀಡಿರುವ ದೂರಿನ ಬಗ್ಗೆ ಪ್ರಕತಿಕ್ರಿಯಿಸಿದ ಅವರು, ಯಾವುದೇ ಯುವತಿ ನಾಪತ್ತೆಯಾದಾಗ ಈ ರೀತಿ ಪೋಷಕರು ದೂರು ನೀಡುವುದು ಸಹಜ. ಅದೇ ರೀತಿ ಇಲ್ಲಿಯೂ ಆಗಿದೆ ಎಂದು ಹೇಳಿದರು.