ಬೆಂಗಳೂರು:ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದಆರೋಪಿ ದಿನೇಶ್‌ನನ್ನು ಚಿಕ್ಕಮಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರ ದಿನೇಶ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ವಂಚಿಸಿರುವುದಾಗಿ ಯುವತಿ ಕಣ್ಣೀರಿಟ್ಟು ಸೆಲ್ಫಿ ವಿಡಿಯೋ ಮಾಡಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.
ಈ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ದಿನೇಶ್‌ನನ್ನು ಬಂಧಿಸುವಲ್ಲಿ ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಕಣ್ಣೀರಿಟ್ಟು ಯುವತಿ ಆತ್ಮಹತ್ಯೆ!
ಪ್ರಕರಣದ ಹಿನ್ನೆಲೆ:
ಮೃತ ಕಿರುತೆರೆ ನಟಿ ಹಾಗೂ ಪ್ರಿಯಕರ ದಿನೇಶ್ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಗೆ ಸಲುಗೆ ಬೆಳೆದು ನಂತ್ರ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಮದುವೆಯಾಗುವುದಾಗಿ ನಂಬಿಸಿರುವ ದಿನೇಶ್ 5 ಲಕ್ಷ ರೂಪಾಯಿ ಹಣವನ್ನೂ ಪಡೆದುಕೊಂಡಿದ್ದನಂತೆ. ನಟಿ ಬಹಳಷ್ಟು ಬಾರಿ ಪ್ರಿಯಕರನಿಗೆ ಮದುವೆಯಾಗುವಂತೆ ದುಂಬಾಲು ಬಿದ್ದರೂ ಕೂಡ ದಿನೇಶ್ ಸತಾಯಿಸಿ, ಮದುವೆಯೂ ಆಗದೇ ದುಡ್ಡನ್ನೂ ವಾಪಸ್ ಕೊಡದೇ ಮೋಸ ಮಾಡಿದ್ದ ಎಂದು ಆಕೆ ವಿಡಿಯೋದಲ್ಲಿ ಹೇಳಿದ್ದಳು. ಇದ್ರಿಂದ ನೊಂದ ನಟಿ ಇದೇ ಮೇ. 28 ರಂದು ವಿಷ ಕುಡಿದು ಸೆಲ್ಫಿ ವಿಡಿಯೋ ಮಾಡಿ ಬೆಂಗಳೂರಿನ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ನ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.