ಕರ್ನಾಟಕ

karnataka

ETV Bharat / state

ಕನ್ನಡಿಗರ ಮನಸ್ಸಿನಲ್ಲಿ ಅಪ್ಪು ಚಿರಸ್ತಾಯಿ : ಬಾವ ರಾಮ್ ಕುಮಾರ್ - ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್​​ ಅಂತಿಮ ದರ್ಶನ

ಪುನೀತ್ ತಂದೆಗೆ ತಕ್ಕ ಮಗನಾಗಿದ್ದರು. ಅಷ್ಟು ಸಾಕು, ಈ ವಯಸ್ಸಿನಲ್ಲಿ ಹೋಗಬಾರದಿತ್ತು. ಎಲ್ಲಾ ಕೆಲಸ ಮಾಡಿದ್ದಾರೆ. 40 ವರ್ಷ ಸಿನಿಮಾದಲ್ಲೇ ಕಳೆದಿದ್ದಾರೆ. ಹಾಗೆ ನೋಡಿದರೆ ಎಲ್ಲರಿಗೂ ಅಪ್ಪು ಸೀನಿಯರ್, ಅವರು ಚಿರಸ್ತಾಯಿಯಾಗಿ ಎಲ್ಲರ ಮನಸ್ಸಿನಲ್ಲಿ ಇರಲಿದ್ದಾರೆ..

Actor Ram kumar
ರಾಮ್ ಕುಮಾರ್

By

Published : Oct 30, 2021, 10:00 PM IST

ಬೆಂಗಳೂರು :ಪುನೀತ್ ರಾಜ್ ಕುಮಾರ್ ಇಷ್ಟು ಚಿಕ್ಕ ವಯಸ್ಸಿಗೆ ಅಗಲಬಾರದಿತ್ತು. ಅವರ ಕಡೆಯ ಪಯಣವನ್ನು ನಾವು ನಾಳೆ ನೆರವೇರಿಸಬೇಕು. ಕನ್ನಡಿಗರ ಮನಸ್ಸಿನಲ್ಲಿ ಅಪ್ಪು ಚಿರಸ್ತಾಯಿಯಾಗಿ ಉಳಿಯಲಿದ್ದಾರೆ ಎಂದು ನಟ ರಾಮ್ ಕುಮಾರ್ ಹೇಳಿದರು.

ಪುನೀತ್ ಜೊತೆಗಿನ​ ಒಡನಾಟವನ್ನು ಬಿಚ್ಚಿಟ್ಟ ನಟ ರಾಮ್​ ಕುಮಾರ್

ಕಂಠೀರವ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ‌ 5 ಗಂಟೆಗೆ ಕ್ರೀಡಾಂಗಣಕ್ಕೆ ಬಂದು ಸೇರಬೇಕು. ವಿಧಿ-ವಿಧಾನದಂತೆ ಕ್ರಿಯೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಇಷ್ಟು ದಿನ ಅಪ್ಪು ನಮಗೆ ತೃಪ್ತಿಪಡಿಸಿದ್ದಾರೆ. ಅದೇ ರೀತಿ ನಾವು ಅವರ ಕೊನೆಯ ಪಯಣವನ್ನು ಯಾವುದೇ ಅಡೆಚಣೆ ಇಲ್ಲದ ರೀತಿಯಲ್ಲಿ ಅವರಿಗಾಗಿ ನಾವೆಲ್ಲ ಮಾಡಬೇಕಿದೆ ಎಂದರು.

ಪುನೀತ್ ತಂದೆಗೆ ತಕ್ಕ ಮಗನಾಗಿದ್ದರು. ಅಷ್ಟು ಸಾಕು, ಈ ವಯಸ್ಸಿನಲ್ಲಿ ಹೋಗಬಾರದಿತ್ತು. ಎಲ್ಲಾ ಕೆಲಸ ಮಾಡಿದ್ದಾರೆ. 40 ವರ್ಷ ಸಿನಿಮಾದಲ್ಲೇ ಕಳೆದಿದ್ದಾರೆ. ಹಾಗೆ ನೋಡಿದರೆ ಎಲ್ಲರಿಗೂ ಅಪ್ಪು ಸೀನಿಯರ್, ಅವರು ಚಿರಸ್ತಾಯಿಯಾಗಿ ಎಲ್ಲರ ಮನಸ್ಸಿನಲ್ಲಿ ಇರಲಿದ್ದಾರೆ ಎಂದರು.

ಇದನ್ನೂ ಓದಿ: ಅಪ್ಪು ಅಂತ್ಯ ಸಂಸ್ಕಾರದ ಬಗ್ಗೆ ಕುಟುಂಬಸ್ಥರ ಜೊತೆ ಸಿಎಂ ಚರ್ಚೆ

ABOUT THE AUTHOR

...view details