ಕರ್ನಾಟಕ

karnataka

ETV Bharat / state

ಸಿಸಿಬಿಯಿಂದ ತುಪ್ಪದ ಹುಡುಗಿ ರಾಗಿಣಿ ಬಂಧನ... ಮುಂದಿನ ಪ್ರಕ್ರಿಯೆ ಏನು? - ಸಿಸಿಬಿ ಪೊಲೀಸರಿಂದ ಬಂಧನ

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

actor Ragini Dwivedi arrested by CCB police
actor Ragini Dwivedi arrested by CCB police

By

Published : Sep 4, 2020, 7:04 PM IST

Updated : Sep 4, 2020, 7:11 PM IST

ಬೆಂಗಳೂರು:ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​​ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅನೇಕ ಗಂಟೆಗಳಿಂದ ವಿಚಾರಣೆಗೊಳಪಟ್ಟಿದ್ದ ನಟಿ ರಾಗಿಣಿಯನ್ನ ಸಿಸಿಸಿ ಪೊಲೀಸರು ಇದೀಗ ಬಂಧನ ಮಾಡಿದ್ದಾರೆ. ಇಂದು ಬೆಳಗ್ಗೆ ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ನಟಿಯನ್ನ ವಶಕ್ಕೆ ಪಡೆದು, ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ.

ಬಂಧನ ಮಾಡಿರುವ ಸಿಸಿಬಿ ಪೊಲೀಸರು ಆಕೆಯನ್ನ ಕೆಲ ಹೊತ್ತಿನಲ್ಲೇ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ. ಬಳಿಕ ವಿಡಿಯೊ ಕಾನ್ಪರೆನ್ಸ್ ಮೂಲಕ‌ ಕೋರ್ಟ್​ಗೆ ಹಾಜರು ಪಡಿಸಲಿದ್ದು, ಈ ವೇಳೆ 7ರಿಂದ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಕೇಳುವ ಸಾಧ್ಯತೆ ಇದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಆರ್​ಟಿಓ ಸಿಬ್ಬಂದಿ ರವಿಶಂಕರ್ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ರಾಗಿಣಿ ಭಾಗಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧನ ಭೀತಿ ಕಾರಣ ಈಗಾಗಲೇ ನಟಿ ರಾಗಿಣಿ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Last Updated : Sep 4, 2020, 7:11 PM IST

ABOUT THE AUTHOR

...view details