ಮೈಸೂರು: ವಾರಂತ್ಯ ಕರ್ಫ್ಯೂ ಇದ್ದರೂ ಅನುಮತಿ ಇಲ್ಲದೆ ಮದುವೆಗೆ ಹೋಗಿ ಬರುತ್ತಿದ್ದ ನಟ ಮಂಡ್ಯ ರಮೇಶ್ಗೆ ಪಿಎಸ್ಐ ಬುದ್ಧಿಮಾತು ಹೇಳಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ವೀಕೆಂಡ್ ಕರ್ಫ್ಯೂ ನಡುವೆಯೂ ಮದುವೆಗೆ ಹೋದ ನಟ ಮಂಡ್ಯ ರಮೇಶ್: ಪಿಎಸ್ಐ ಹೇಳಿದ್ದೇನು? - weekend curfew
ವೀಕೆಂಡ್ ಕರ್ಫ್ಯೂ ಇದ್ದರೂ ಮದುವೆಗೆ ತೆರಳಿ ವಾಪಸ್ ಆಗ್ತಿದ್ದ ನಟ ಮಂಡ್ಯ ರಮೇಶ್ಗೆ ಪಿರಿಯಾಪಟ್ಟಣ ಪೊಲೀಸ್ ಕಾರು ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ ಮಂಡ್ಯ ರಮೇಶ್ ಮದುವೆ ಕಾರ್ಡ್ ತೋರಿಸಿದ್ದು, ಪಿಎಸ್ಐ ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು ಎಂದು ಹೇಳಿ ಕಳಿಸಿದ್ದಾರೆ.
mandya ramesh
ನಟ ಮಂಡ್ಯ ರಮೇಶ್ ಮದುವೆಗೆ ಹೋಗಿ ಬರುತ್ತಿರುವುದಾಗಿ ಹೇಳಿದಾಗ, ಮದುವೆಯಾಗುವವರು, ಕಲ್ಯಾಣಮಂಟಪದಲ್ಲೇ ಇರುವವರಿಗೆ ಅನುಮತಿ ಕೊಟ್ಟಿದ್ದಾರೆ. ನೀವು ಕಾರಿನಲ್ಲಿ ಹೋಗುವುದಕ್ಕೆ ಅನುಮತಿ ಪಡೆಯಬೇಕು. ಅದಕ್ಕೆ ಪಾಸ್ ಕೊಡುತ್ತಾರೆ, ತೆಗೆದುಕೊಳ್ಳಬೇಕು ಎಂದು ಬೈಲಕುಪ್ಪೆ ಠಾಣೆ ಪಿಎಸ್ಐ ಪುಟ್ಟರಾಜು ಹೇಳಿದ್ದಾರೆ. ಅದಕ್ಕೆ ಮಂಡ್ಯ ರಮೇಶ್ ಮದುವೆ ಕಾರ್ಡ್ ತೋರಿಸಲು ಮುಂದಾದಾಗ, ಆಯ್ತು ಹೋಗಿ ಅಂತಾ ಪಿಎಸ್ಐ ಕಳುಹಿಸಿದ್ದಾರೆ.
Last Updated : Apr 24, 2021, 10:36 PM IST