ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಿರುದ್ಧ ದೂರು ಸ್ವೀಕರಿಸಲು ಯಾವ ಠಾಣೆಯ ಪೊಲೀಸರು ನಿರಾಕರಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹಲಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧೀರ್ ರೆಡ್ಡಿ ವಿರುದ್ಧ ಭೂ ಒತ್ತುವರಿ ಆರೋಪ ಪ್ರಕರಣ ಸಂಬಂಧ ಖ್ಯಾತ ಹಾಸ್ಯ ನಟ ಮಹಮೂದ್ ಅಲಿ ಪುತ್ರ ಹಾಗೂ ಗಾಯಕ ಲಕ್ಕಿ ಅಲಿಯಿಂದ ಡಿಜಿಪಿಗೆ ಟ್ವೀಟ್ ಮೂಲಕ ದೂರು ಬಂದಿದೆ ಎನ್ನಲಾಗಿದೆ. ಈ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ ನೋಡಿದೆ. ಲಕ್ಕಿ ಅಲಿಯವರ ದೂರಿನ ಬಗ್ಗೆ ಮಾಹಿತಿ ಪಡೆಯುತ್ತೇನೆ. ಡಿಜಿಪಿಯವರ ಜತೆ ಇದರ ಬಗ್ಗೆ ಮಾತಾಡುತ್ತೇನೆ. ನಂತರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.