ಬೆಂಗಳೂರು: ಚಿಕ್ಕಪೇಟೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಜೊತೆ ಮಹಿಳೆಯೊಬ್ಬರು ಗಲಾಟೆ ಮಾಡಿ, ಪೊಲೀಸ್ ಸಿಬ್ಬಂದಿಯ ಕೈ ಕಚ್ಚಿದ ಘಟನೆ ನಿನ್ನೆ ಸಂಜೆ ನಡೆದಿದೆ.
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಅಂಗಡಿ ಮುಂಗಟ್ಟುಗಳನ್ನು ಆದಷ್ಟು ಬೇಗ ಮುಚ್ಚುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಪೊಲೀಸರು ನಿಗದಿತ ಸಮಯದ ನಂತರ ಎಲ್ಲಾ ಅಂಗಡಿಗಳ ಬಳಿ ಹೋಗಿ ಅಂಗಡಿಗಳನ್ನು ಮುಚ್ಚುವಂತೆ ಎಚ್ಚರಿಕೆ ನೀಡುತ್ತಿದ್ದಾರೆ. ನಿನ್ನೆ ಸಹ ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡುತ್ತಿದ್ದರು. ಈ ವೇಳೆ ಶಾಪಿಂಗ್‌ಗೆ ಅಂತ ಬಂದಿದ್ದ ಮಹಿಳೆ ಜನರಿಗೆ ಯಾಕೆ ಸಮಸ್ಯೆ ಕೊಡುತ್ತಿದ್ದೀರಾ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆ ಪೊಲೀಸರ ವಿಡಿಯೋ ಮಾಡಲು ಮುಂದಾಗಿದ್ದಾರೆ.