ಬೆಂಗಳೂರು:ದಂಪತಿಯ ಖಾಸಗಿ ವಿಡಿಯೋಗಳನ್ನ ಸೆರೆಹಿಡಿದ ಅಪರಿಚಿತ ವ್ಯಕ್ತಿ, ಆ ದೃಶ್ಯಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡ-ಹೆಂಡತಿಯ ಖಾಸಗಿ ವಿಡಿಯೋ ಸೆರೆಹಿಡಿದ ಖದೀಮ: ಮುಂದೇನಾಯ್ತು?
ದಂಪತಿಯ ಖಾಸಗಿ ವಿಡಿಯೋಗಳನ್ನ ಅಪರಿಚಿತ ವ್ಯಕ್ತಿವೋರ್ವ ಸೆರೆಹಿಡಿದು, ಬೆದರಿಕೆ ಹಾಕಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಂಪತಿ ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು, ಗಂಡ- ಹೆಂಡತಿಯ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದಿದ್ದ. ಬಳಿಕ ಮಹಿಳೆಯ ನಂಬರ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಹಾಗೂ ಸಂದೇಶ ರವಾನಿಸಿದ್ದಾನೆ ಎಂದು ತಿಳಿದುಬಂದಿದೆ.
ಅಲ್ಲದೆ, ಕೇಳಿದಷ್ಟು ಹಣ ಕೊಡದಿದ್ದರೇ ಈ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಯಾರೋ ಗೊತ್ತಿರುವವರೇ ಈ ರೀತಿ ಮಾಡುತ್ತಿರುವ ಅನುಮಾನ ವ್ಯಕ್ತಪಡಿಸಿರುವ ದಂಪತಿ ಈ ಕುರಿತು ಬಂಡೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಖದೀಮನ ಬಂಧನಕ್ಕೆ ಬಲೆ ಬೀಸಿದ್ದಾರೆ.