ಬೆಂಗಳೂರು :ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ನೆತಾಯಿಚಾಂದ್ ಜಾನ್ ವಂಚನೆ ಮಾಡುತ್ತಿದ್ದ ವ್ಯಕ್ತಿ.
ಸೇನಾಸಮವಸ್ತ್ರ ಧರಿಸಿ ಓಡಾಡುತ್ತಿದ್ದ ನೆತಾಯಿಚಾಂದ್, ಸೇನೆಗೆ ಸೇರುವ ಅಭ್ಯರ್ಥಿಗಳಿಗೆ ತನ್ನ ಫೋನ್ ನಂಬರ್ ಕೊಟ್ಟು ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಯುವಕರಿಂದ ಹಣ ಪಡೆಯುತ್ತಿದ್ದನಂತೆ.
ನೆತಾಯಿಚಾಂದ್ 1993ರಲ್ಲಿ ಸೇನೆ ಸೇರಿ 2003ರಲ್ಲಿ ಸೇನೆಯಿಂದ ಓಡಿ ಬಂದಿದ್ದ. ವಿವೇಕನಗರ ಮಿಲಿಟರಿ ಕ್ಯಾಂಪಸ್ ಸುತ್ತಾಮುತ್ತ ಓಡಾಡಿಕೊಂಡಿರುತ್ತಿದ್ದ. ಸದಾ ಸೇನಾ ಸಮವಸ್ತ್ರದಲ್ಲೇ ಇರುತ್ತಿದ್ದ.
ಈತ ಹೊಸದಾಗಿ ಸೇನೆ ಸೇರುವ ಅಭ್ಯರ್ಥಿಗಳಿಗೆ ನನಗೆ ದೊಡ್ಡ ಅಧಿಕಾರಿಗಳ ಪರಿಚಯವಿದ್ದು, ನಿಮಗೆ ಕೆಲಸ ಪಕ್ಕಾ ಕೊಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ವಿವೇಕನಗರ ಪೊಲೀಸರು ನೆತಾಯಿಚಾಂದ್ನನ್ನ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.