ಸಹಚರರಿಂದಲೇ ಹತ್ಯೆಯಾದ ರೌಡಿಶೀಟರ್; ಸಿಸಿಟಿವಿ ಕ್ಯಾಮರಾದಲ್ಲಿ ವಿಡಿಯೋ ಸೆರೆ ಬೆಂಗಳೂರು:ಸಹಚರರಿಂದಲೇ ರೌಡಿಶೀಟರ್ ಹತ್ಯೆಯಾದ ಪ್ರಕರಣದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮೇ 25ರಂದು ಮಹಾದೇವಪುರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ರೇಣುಕುಮಾರ್(25) ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿತ್ತು. ಪ್ರಕರಣದ ಆರೋಪಿಗಳಾದ ಶ್ರೀಕಾಂತ್, ಪ್ರಶಾಂತ್ ಹಾಗೂ ವಸಂತ್ನನ್ನು ಮಹಾದೇವಪುರ ಠಾಣಾ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ:ಬಾರ್ ಕ್ಯಾಷಿಯರ್ ಕೊಲೆ ಪ್ರಕರಣ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ
ಹತ್ಯೆಯಾದ ರೌಡಿಶೀಟರ್ ರೇಣುಕುಮಾರ್ ಕೊಲೆ, ಕೊಲೆಯತ್ನ, ಕಳ್ಳತನ, ಹಲ್ಲೆ ಸೇರಿದಂತೆ 7ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆರೋಪಿಗಳಾದ ಶ್ರೀಕಾಂತ್ ಹಾಗೂ ಪ್ರಶಾಂತ್ ರೇಣುಕುಮಾರನ ಸಹಚರರೇ ಆಗಿದ್ದವರು. ''ತಾನು ಜೈಲಿನಲ್ಲಿದ್ದಾಗ ಏರಿಯಾದಲ್ಲಿ ನಿಮ್ಮ ಹವಾ ಜಾಸ್ತಿಯಾಗಿದೆ. ಇನ್ಮುಂದೆ ಏನೇ ಮಾಡಿದರೂ ನನ್ ಪರ್ಮಿಷನ್ ತಗೋಬೇಕು' ಎಂದು ಶ್ರೀಕಾಂತ್ ಹಾಗೂ ಪ್ರಶಾಂತ್ನಿಗೆ ಬೆದರಿಕೆ ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ರೇಣುಕುಮಾರ್ನನ್ನು ಮೇ 25ರಂದು ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು.
ಚಿಕ್ಕಮಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ.. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನೂತನ ಶಾಸಕರ ಅಭಿನಂದನಾ ಕಾರ್ಯಾಕ್ರಮದಲ್ಲಿ ಒಂದು ಸಿನಿಮಾ ಹಾಡಿನ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿದ್ದ ಜಗಳ ಅಂದು ರಾತ್ರಿ ಯುವಕನ ಕೊಲೆಯಲ್ಲಿ ಅಂತ್ಯವಾಗಿತ್ತು. ವರುಣ್ ಎಂಬ ಯುವಕ ಹತ್ಯೆಗೀಡಾಗಿದ್ದ.
ಪ್ರಕರಣದ ಹಿನ್ನೆಲೆ: ಕಾಂಗ್ರೆಸ್ನಿಂದ ಜಿ. ಹೆಚ್. ಶ್ರೀನಿವಾಸ್ ಅವರು ಗೆಲುವು ಸಾಧಿಸಿದ್ದಕ್ಕೆ ಅಭಿನಂದನಾ ಕಾರ್ಯಕ್ರಮವನ್ನು ತರೀಕೆರೆ ಪಟ್ಟಣದಲ್ಲಿ ಜೂನ್ 4 ರಂದು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಸ್ಥಳದಲ್ಲಿ ಸೇರಿದ್ದವರೆಲ್ಲರೂ ಮಧ್ಯಾಹ್ನವೇ ಕುಣಿದು ಕುಪ್ಪಳಿಸಿದ್ದರು. ಈ ವೇಳೆ ಮೃತ ವರುಣ್ ಹಾಗೂ ಕೊಲೆ ಆರೋಪಿ ಮೂರ್ತಿ ತಂಡದ ಮಧ್ಯೆ ಒಂದೇ ಒಂದು ಸಿನಿಮಾ ಹಾಡಿಗೆ ಮಾತಿನ ಚಕಮಕಿ ನಡೆದಿತ್ತು. ಇದು ಅಷ್ಟರಲ್ಲೇ ತಣ್ಣಗಾಗಿತ್ತು. ಆದ್ರೆ, ರಾತ್ರಿ ವೇಳೆಗೆ ಹಾಡಿನ ಗಲಾಟೆ ನೆನಪಾಗಿ ಮತ್ತೆ ಜಗಳು ಶುರುವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿ ಮೂರ್ತಿ ತಂಡದವರು ವರುಣ್ ಪಕ್ಕೆಗೆ ಚಾಕುವಿನಿಂದ ಇರಿದಿದ್ದರು. ಇದೇ ವೇಳೆ ಮಂಜು ಹಾಗೂ ಸಂಜು ಎಂಬುವರ ಕಾಲಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರು.
ಪಕ್ಕೆಗೆ ಚಾಕು ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದರಿಂದ ವರುಣ್ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದ.