ಬೆಂಗಳೂರು :ಸೂರ್ಯೋದಯದಿಂದ ಹಿಡಿದು ಚಂದ್ರ ಬಾನಿಂದ ಮರೆಗೆ ಜಾರುವವರೆಗೂ ಇ-ಮೇಲ್, ಇ-ವಾಲೆಟ್ (ಪೇಟಿಎಂ, ಫೋನ್ಪೇ, ಗೂಗಲ್ಪೇ...), ಫೇಸ್ಬುಕ್, ವಾಟ್ಸ್‌ಆ್ಯಪ್, ಇನ್ಸ್ಟಾಗ್ರಾಂ, ಟ್ವಿಟರ್ನಲ್ಲೇ ಮಾನವ ಅಡ್ಡಾಡುತ್ತಿರುತ್ತಾನೆ.
ಸೈಬರ್ ಅಪರಾಧ ಕಡಿವಾಣಕ್ಕೆ ತೊಡಕುಗಳೇನು? ಹೀಗಾಗಿ, ಸೈಬರ್ ಖದೀಮರು ಯಾವುದೋ ದೇಶ ಅಥವಾ ರಾಜ್ಯದಲ್ಲಿ ಕೂತು ಅಮಾಯಕರ ಬ್ಯಾಂಕ್ ಖಾತೆಗೆ ಕನ್ನ, ಇಮೇಲ್ ಐಡಿ ಹ್ಯಾಕ್, ಸಾಮಾಜಿಕ ಜಾಲತಾಣದಲ್ಲಿ ಫೋಟೋ ದುರ್ಬಳಕೆ ಮಾಡಿ ಹಣ ಗಳಿಸುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ...ನಕಲಿ ಆಧಾರ್, ಪ್ಯಾನ್ ಕಾರ್ಡ್ ಪ್ರಿಂಟ್ ಮಾಡುವ ಬೃಹತ್ ಜಾಲ ಪತ್ತೆ
ವಂಚಕರು ಎಲ್ಲಿದ್ದಾರೆ? ಬಳಸುತ್ತಿರುವ ತಂತ್ರಜ್ಞಾನ ಯಾವುದು ಎಂಬೆಲ್ಲಾ ಮಾಹಿತಿ ಕೊರತೆಯಿಂದ ಸೈಬರ್ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗುತ್ತಿದ್ದಾರೆ. ಇತರೆ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಚಲನವಲನ, ಸ್ಥಳ, ಗುರುತು ಹೀಗೆ ಏನಾದ್ರೂ ಸುಳಿವು ಸಿಕ್ಕೇ ಸಿಗುತ್ತದೆ.
ಆದರೆ, ಸೈಬರ್ ಅಪರಾಧ ಪ್ರಕರಣಗಳಲ್ಲಿ ಒಂದು ಮಾಹಿತಿಯೂ ಲಭ್ಯವಾಗುವುದಿಲ್ಲ. ಇದರಿಂದ ಸೈಬರ್ ಅಪರಾಧ ಜಗತ್ತು ಅಂದುಕೊಂಡದ್ದಕ್ಕಿಂತ ವೇಗ ಪಡೆದುಕೊಂಡಿದ್ದು, ಪ್ರಕರಣಗಳು ಅದೇ ರೀತಿ ಅಧಿಕವಾಗುತ್ತಿವೆ.
ಸೈಬರ್ ಅಪರಾಧ ತಜ್ಞೆ ಶುಭ ಮಂಗಳ ಮಾತನಾಡಿ, ಸೈಬರ್ ವಂಚಕರು ಖಾತೆಗೆ ಕನ್ನ ಹಾಕಿದಾಗ ಆ ದುಡ್ಡು ಮರಳಿ ಸಿಗುತ್ತಾ? ಯಾರು ಮಾಡುತ್ತಿದ್ದಾರೆ? ಹೀಗೆ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ. ಕಳೆದುಕೊಂಡ ಹಣ ಶೇ.90ರಷ್ಟು ಸಿಗಲ್ಲ.
ಸೈಬರ್ ಅಪರಾಧ ತಜ್ಞೆ ಶುಭಾ ಮಂಗಳ ಸಾವಿರ, ಐದು ಸಾವಿರ, ಹತ್ತು ಸಾವಿರ ಹಣ ಕಳೆದುಕೊಂಡ ಸಮಯದಲ್ಲಿ ಯಾರು ಅದನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ಕೋಟ್ಯಂತರ, ಲಕ್ಷಾಂತರ ರೂಪಾಯಿ ಮಾಯವಾದಾಗ ಮರಳಿ ಪಡೆಯಲು ಅಂತಾರಾಷ್ಟ್ರೀಯ ವೇದಿಕೆಗಳ ಮೊರೆ ಹೋಗಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮುಂದುವರೆದ ತಂತ್ರಜ್ಞಾನ ಸೈಬರ್ ಪೊಲೀಸರಿಗೆ ಸಿಗಬೇಕು. ಹಾಗೆಯೇ ಇದಕ್ಕೆ ತಕ್ಕಂತೆ ಸರ್ಕಾರ ಕೂಡ ಅಪ್ಡೇಟ್ ಆಗಬೇಕು. ಡಿವೈಸ್ಗಳ ಸೈಬರ್ ತಂಡಗಳು ಕಣ್ಣಿಟ್ಟಿರಬೇಕು. ಸೈಬರ್ ಅಪರಾಧ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಣ್ಣ ಮೊತ್ತದ ಹಣ ಕಳೆದುಕೊಂಡರೂ ಪ್ರಕರಣ ದಾಖಲಿಸಲು ಮುಂದಾಗಬೇಕು. ಯಾರೂ ನಿರ್ಲಕ್ಷ್ಯ ಮಾಡಬಾರದು ಎಂದರು.