ಬೆಂಗಳೂರು:ನಿವೇಶನ ವಿಚಾರದಲ್ಲಿ ಪೊಲೀಸರು ಶಾಮೀಲಾಗಿ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಸಿಎಂ ಬೊಮ್ಮಾಯಿ ಅವರ ಎದುರೇ ವೃದ್ಧರೊಬ್ಬರು ವಿಷ ಕುಡಿಯಲು ಯತ್ನಸಿದ ಘಟನೆ ನಡೆದಿದೆ.
ಆರ್ಟಿ ನಗರದಲ್ಲಿರುವ ಸಿಎಂ ನಿವಾಸದ ಎದುರು ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸುಂಕದಕಟ್ಟೆ ನಿವಾಸಿ ಚಂದ್ರಶೇಖರ್ ಎಂಬುವವರು ಆಗಮಿಸಿದ್ದರು. ನನಗೆ ಪೊಲೀಸರಿಂದಲೇ ಅನ್ಯಾಯವಾಗಿದೆ ಎಂದು ಸಿಎಂಗೆ ದೂರು ನೀಡಿದರು. ಪೊಲೀಸರು ಕೆಲವರ ಜೊತೆ ಸೇರಿ ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ. ಮೋಸ ಮಾಡಿದ್ದಾರೆ ಎಂದು ಅನ್ನೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಮಾಡಿದ ವೃದ್ಧ, ನ್ಯಾಯ ಕೊಡಿಸುವಂತೆ ಎಂದು ಸಿಎಂ ಬಳಿ ಮನವಿ ಮಾಡಿದರು.