ಕರ್ನಾಟಕ

karnataka

ETV Bharat / state

ಎಣ್ಣೆ ಕೊಡಿಸಯ್ಯಾ, ಎಣ್ಣೆ ಕೊಡಿಸು ಅಂತಾ ಪೀಡಿಸ್ತಿದ್ನಂತೆ,, ಅದಕ್ಕೆ ಕೊಲೆ ಮಾಡ್ಬಿಟ್ನಂತೆ ಇಲ್ಲೊಬ್ಬ ಪಾಪಿ.. - kannada news

ಗುರಾಯಿಸಿದ್ದ ಎಂಬ ಕಾರಣಕ್ಕೆ ಅರುಣ್ ಎಂಬುವನು ಅಮೀನ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದ. ಜೊತೆಗೆ ಪದೇಪದೆ ಮದ್ಯ ಕೊಡಿಸುವಂತೆ ಅರುಣ್‌ನನ್ನು ಪೀಡಿಸುತ್ತಿದ್ದನಂತೆ. ಮದ್ಯ ಸೇವಿಸಿ ಅಮೀನ್ ಮನೆ ಬಳಿ ಹೋಗಿ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಂತೆ. ಇದರಿಂದ ಜಗಳ ವಿಕೋಪಕ್ಕೆ ತಿರುಗಿದೆ.

ಮದಿರೆಯ ಮದದಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

By

Published : Jun 23, 2019, 8:22 AM IST

ಬೆಂಗಳೂರು :ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದಯಾನಂದನಗರ ನಿವಾಸಿ ಅರುಣ್‌ಕುಮಾರ್ ಎಂಬಾತ ಕೊಲೆಯಾದವ. ಈ ಸಂಬಂಧ ಸ್ಥಳೀಯ ನಿವಾಸಿ ಅಮಿನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಗುರಾಯಿಸಿದ್ದ ಎಂಬ ಕಾರಣಕ್ಕೆ ಅರುಣ್ ಎಂಬುವನು ಅಮೀನ್ ಮೇಲೆ ಹಲ್ಲೆ ನಡೆಸಿದ್ದನಂತೆ. ಜೊತೆಗೆ ಪದೇಪದೆ ಮದ್ಯ ಕೊಡಿಸುವಂತೆ ಅರುಣ್‌ನನ್ನು ಪೀಡಿಸುತ್ತಿದ್ದನಂತೆ. ಮದ್ಯ ಸೇವಿಸಿ ಅಮೀನ್ ಮನೆ ಬಳಿ ಹೋಗಿ ಆತನ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನಂತೆ. ಇದರಿಂದ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ಅರುಣ್ ಮತ್ತು ಸ್ನೇಹಿತರು ಅಮೀನ್ ಮೇಲೆ ಹಲ್ಲೆ ನಡೆಸಿದ್ದಾರೆ.

ಇದರಿಂದ ಕುಪಿತಗೊಂಡ ಅರುಣ್ ಮನೆಗೆ ಬಂದು ಚಾಕು ತೆಗೆದುಕೊಂಡು ಹೋಗಿ ಅರುಣ್ ಜತೆ ಜಗಳವಾಡ್ತಾ ಜಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅರುಣ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details