ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೌಕರರನ್ನು ವಜಾ ಮಾಡಲಾಗಿದೆ. ಇಂದೇ ರಜೆಗೆ ಕಾರಣ ನೀಡಿ ಇಂದೇ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಈ ನೋಟಿಸ್ಗೆ ಉತ್ತರ ನೀಡದೆ ಕರ್ತವ್ಯಕ್ಕೆ ಗೈರಾಗಿರುವ ಸಂಬಂಧ 96 ಮಂದಿ ತರಬೇತಿ ನೌಕರರನ್ನ ಬಿಎಂಟಿಸಿ ವಜಾ ಮಾಡಿದೆ.
ಮುಷ್ಕರದಲ್ಲಿದ್ದ ಸಾರಿಗೆ ನೌಕರರಿಗೆ ಶಾಕ್: 96 ತರಬೇತಿನಿರತ ನೌಕರರು ವಜಾ - ಮುಷ್ಕರಲ್ಲಿದ್ದ ಸಾರಿಗೆ ನೌಕರರಿಗೆ ಶಾಕ್
ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಹಲವೆಡೆ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಇದೀಗ ಬಿಎಂಟಿಸಿಯ 96 ಮಂದಿ ತರಬೇತಿನಿರತ ನೌಕರರನ್ನು ಸಂಸ್ಥೆ ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಿದೆ.
96 ಮಂದಿ ತರಬೇತಿನಿರತ ನೌಕರರು ಅಮಾನತು
ನಿನ್ನೆ ಸೂಚನೆ ನೀಡಿದ್ದರೂ ತರಬೇತಿ ಚಾಲಕರು ಇಂದು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ನಿಯಮದ ಪ್ರಕಾರ ಟ್ರೈನಿ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗುವಂತಿಲ್ಲ. ಹೀಗಾಗಿ ವಜಾ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಬಿಎಂಟಿಸಿ ಭದ್ರತೆ ಹಾಗೂ ಜಾಗೃತ ದಳ ನಿರ್ದೇಶಕ ಅರುಣ್ ಮಾಹಿತಿ ನೀಡಿದ್ದಾರೆ.
Last Updated : Apr 8, 2021, 7:39 PM IST