ಕರ್ನಾಟಕ

karnataka

ETV Bharat / state

ಪಾದರಾಯನಪುರದಲ್ಲಿ ಇಂದು ಮತ್ತೆ 8 ಜನರಿಗೆ ಕೊರೊನಾ ಪಾಸಿಟಿವ್

ಪಾದರಾಯನಪುರದಲ್ಲಿ ಗುರುವಾರ ಏಂಟು ಜನರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಈ ಮೂಲಕ ಕಂಟೇನ್ಮೆಂಟ್​​​ ​​​​ ವಲಯದಲ್ಲಿದ್ದ ವಾರ್ಡ್​ ಮತ್ತೆ ಡೇಂಜರ್​​ ಝೋನ್​​ಗೆ ಸೇರಿದೆ.

ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

By

Published : Apr 30, 2020, 8:24 PM IST

ಬೆಂಗಳೂರು: ಕಂಟೇನ್ಮೆಂಟ್​​​ ವಲಯದಲ್ಲಿರುವ ಪಾದರಾಯನಪುರ ವಾರ್ಡ್ ಮತ್ತೆ ಡೇಂಜರ್ ಝೋನ್​ಗೆ ಸೇರಿದೆ. ಲಾಕ್​​ಡೌನ್ ಇದ್ದರೂ ನಿಯಮ ಉಲ್ಲಂಘಿಸಿ, ಲೆದರ್ ಜರ್ಕಿನ್ ಜಾಕೆಟ್ ತಯಾರಿಸುತ್ತಿದ್ದ ಕಂಪನಿಯಿಂದಾಗಿ ಗುರುವಾರ ಏಂಟು ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

ಮೊದಲು ತಬ್ಲಿಘಿಯ ಸಂಪರ್ಕದಿಂದ ಕೊರೊನಾ ಕಂಪನಿಯ ಮಾಲೀಕನಿಗೆ ಹರಡಿತ್ತು. ಮಾಲೀಕ ರೋಗಿ ನಂ.199ಗೆ ಏಪ್ರಿಲ್ ಒಂಬತ್ತರಂದು ಸೋಂಕು ಕಂಡುಬಂದಿತ್ತು. ಅವನಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದ, 292 ರೋಗಿಗೆ 15 ನೇ ಏಪ್ರಿಲ್​ನಲ್ಲಿ ಕಂಡುಬಂದಿತ್ತು. ಇವನ ಸಂಪರ್ಕದಲ್ಲಿದ್ದ ಪಕ್ಕದ ಮನೆಯವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಈ ಐವರಲ್ಲಿ ಇಂದು ಕೊರೊನಾ ಕಂಡುಬಂದಿದೆ.

ಪಾದರಾಯನಪುರದಲ್ಲಿ 8 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಬೆಳಗಿನ ರಿಪೋರ್ಟ್​ನಲ್ಲಿ ಪಾಸಿಟಿವ್ ಬಂದಿರುವ 28 ವರ್ಷದ ಯುವಕ 11 ನೇ ಕ್ರಾಸ್ ಏರಿಯಾದಲ್ಲೇ ಇದ್ದು, ಲೆದರ್ ಜರ್ಕಿನ್ ಆಂಡ್ ಜಾಕೆಟ್ ಟ್ರೇಡ್​ನಲ್ಲಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ 20 ವರ್ಷದ ಯುವಕನನ್ನು ಕ್ವಾರಂಟೈನ್​ನಲ್ಲಿ ಇಡಲಾಗಿತ್ತು. ಅವನಲ್ಲಿಯೂ ಕೊರೊನಾ ಇರುವುದು ಇಂದು ದೃಢಪಟ್ಟಿದೆ.

ಹೋಟೆಲ್ ಕ್ವಾರಂಟೈನ್​ನಲ್ಲಿದ್ದ ಪಾದರಾಯನಪುರದ 10 ನಿವಾಸಿಗಳ ಪೈಕಿ, 35 ವರ್ಷದ ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಲ್ಲಿ ಇಂದು ಕೊರೊನಾ ಪತ್ತೆಯಾಗಿದೆ. ಅವರು 281 ರೋಗಿಯ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.

ಒಟ್ಟು 281 ರೋಗಿಯ ಸಂಪರ್ಕದಲ್ಲಿದ್ದ ಹತ್ತು ಜನ ಸಂಪರ್ಕಿತರಲ್ಲಿ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ. 292 ರೋಗಿಯ ಸಂಪರ್ಕದಲ್ಲಿದ್ದ 34 ಜನರನ್ನ ಕ್ವಾರಂಟೈನ್​ನಲ್ಲಿ ಇದ್ದರು, ಇವರಲ್ಲಿ ಐದು ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ತಿಳಿಸಿದ್ದಾರೆ.

ABOUT THE AUTHOR

...view details