ಕರ್ನಾಟಕ

karnataka

ETV Bharat / state

72 ಮಹಿಳಾ ಕಾನ್​ಸ್ಟೇಬಲ್​ಗಳು ಹೆಡ್ ಕಾನ್​ಸ್ಟೇಬಲ್ ಆಗಿ ಬಡ್ತಿ: ಎಡಿಜಿಪಿ ಅಲೋಕ್ ಕುಮಾರ್ ಆದೇಶ - ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ

ಪೊಲೀಸ್ ಇಲಾಖೆಯಲ್ಲೇ ಪ್ರಥಮ ಬಾರಿಗೆ ಕಾನ್‌ಸ್ಟೇಬಲ್‌ ಆಗಿ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸಿದ 72 ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್​ಗಳಿಗೆ ಹೆಡ್ ಕಾನ್​ಸ್ಟೇಬಲ್ ಆಗಿ ಬಡ್ತಿ ನೀಡಲಾಗಿದೆ.

Bengaluru
ಮಂಜುಳಾ ಬಿ. ಹುನಗುಂಡಿರವರಿಗೆ ಹೆಡ್‌ ಕಾನ್​ಸ್ಟೇಬಲ್ ಆಗಿ ಪದೋನ್ನತಿ

By

Published : Feb 24, 2021, 11:57 AM IST

ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ಕಾನ್‌ಸ್ಟೇಬಲ್‌ ಆಗಿ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸಿದ 72 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್​ಗಳಿಗೆ ಹೆಡ್ ಕಾನ್​ಸ್ಟೇಬಲ್ ಆಗಿ ಬಡ್ತಿ ನೀಡಿ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 72 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್​ಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಬಡ್ತಿ ನೀಡಿದ್ದಾರೆ‌.

ಕಾನ್ಸ್‌ಟೇಬಲ್ ಹುದ್ದೆಯಲ್ಲಿ ಕೇವಲ 3 ವರ್ಷ ಸೇವಾವಧಿ ಪೂರೈಸಿದ ಮಂಜುಳಾ ಬಿ. ಹುನಗುಂಡಿ ಅವರಿಗೆ ಹೆಡ್‌ ಕಾನ್​ಸ್ಟೇಬಲ್ ಆಗಿ ಪದೋನ್ನತಿ ನೀಡಲಾಗಿದೆ‌‌. ಪೊಲೀಸ್ ಇಲಾಖೆಯಲ್ಲೇ ಪ್ರಥಮ ಬಾರಿಗೆ ಕಡಿಮೆ ವರ್ಷಗಳ ಸೇವಾವಧಿಯಲ್ಲಿ ಪ್ರಮೋಷನ್ ನೀಡಿದ ಘಟನೆ ಇದಾಗಿದೆ. ಈ ಹಿಂದೆ 13 ರಿಂದ 20 ವರ್ಷಗಳ ಸೇವಾವಧಿ ಪೂರೈಸಿದ ನಂತರ ಪದೋನ್ನತಿ ನೀಡಲಾಗುತ್ತಿತ್ತು. ಪ್ರಸ್ತುತ 3 ವರ್ಷಗಳಿಗೆ ಬಡ್ತಿ ಸಿಗುತ್ತಿದೆ.

ಕೆಎಸ್‌ಆರ್‌ಪಿ 4 ನೇ ಪಡೆಯ ಘಟಕದ ಮಹಿಳಾ ಸಿಬ್ಬಂದಿ ರಂಜಿತಾ ಮತ್ತು ಹೆಚ್.ಆರ್‌ ಅನಿತಾ ಎಂಬುವರು 24ನೇ ವರ್ಷಕ್ಕೆ ಹೆಡ್‌ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಪಡೆದಿದ್ದಾರೆ. 3 ವರ್ಷ ಸೇವೆ ಪೂರೈಸಿದ ಒಬ್ಬ ಮಹಿಳಾ ಪೊಲೀಸ್ ಹಾಗೂ 4 ವರ್ಷ ಸೇವೆ ಪೂರೈಸಿದ 27 ಮಂದಿ ಮತ್ತು 5 ವರ್ಷ ಸೇವೆ ಪೂರೈಸಿದ 34 ಮಹಿಳಾ ಪೊಲೀಸರು ಸೇರಿ ಒಟ್ಟು 72 ಮಹಿಳಾ ಕಾನ್ಸ್‌ಟೇಬಲ್​ಗಳಿಗೆ ಮುಂಬಡ್ತಿ ನೀಡಲಾಗಿದೆ‌‌‌.

ABOUT THE AUTHOR

...view details