ಬೆಂಗಳೂರು:ಕೊರೊನಾ ವಾರಿಯರ್ಸ್ಗಳಿಗೂ ವ್ಯಾಪಕವಾಗಿ ಮಹಾಮಾರಿ ಸೋಂಕು ಹರಡುತ್ತಿದ್ದು, ಸರ್ಜಾಪುರ ಪೊಲೀಸ್ ಠಾಣೆಯ ಏಳು ಸಿಬ್ಬಂದಿಗೆ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಸರ್ಜಾಪುರ ಠಾಣೆಯ 7 ಪೊಲೀಸರಿಗೆ ಕೊರೊನಾ: ಸ್ಟೇಷನ್ ಸೀಲ್ಡೌನ್ - bengaluru
ಸರ್ಜಾಪುರ ಪೊಲೀಸ್ ಠಾಣೆಯ ಏಳು ಸಿಬ್ಬಂದಿಗೆ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದ ಪೊಲೀಸ್ ಠಾಣೆಯೊಂದರಲ್ಲಿಯೇ ಕಳೆದ ಒಂದು ವಾರದಿಂದ ಪಿಎಸ್ಐ ಸೇರಿ ಒಟ್ಟು ಏಳು ಜನ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲದೆ, ಪ್ರಾಥಮಿಕ ಸಂಪರ್ಕದಲ್ಲಿದ್ದ 30 ಜನರನ್ನು ಕ್ವಾರೆಂಟೈನ್ ಮಾಡಲಾಗಿದ್ದು, ಎಲ್ಲ ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಇನ್ನು ಈಗಾಗಲೇ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಒಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟು ಬಳಿಕ ಕೆಲ ಸಿಬ್ಬಂದಿ ಸೋಂಕಿಗೆ ತುತ್ತಾಗಿ ಠಾಣೆಯನ್ನ ಸೀಲ್ಡೌನ್ ಮಾಡಲಾಗಿತ್ತು. ಇದಾದ ಬಳಿಕ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಏಳು ಮಂದಿಗೆ ಸೋಂಕು ತಗುಲಿದ್ದು, ಸೀಲ್ಡೌನ್ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.