ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) '60 ವಸಂತಗಳ ಸಂಭ್ರಮ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕು ಸಾರಿಗೆ ನಿಯಮಗಳಲ್ಲಿನ ಅಪಘಾತರಹಿತ ಚಾಲಕರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ ಮಾಡಿದರು.
ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಕೆಎಸ್‌ಆರ್‌ಟಿಸಿ 60ವರ್ಷಗಳ ಕಾಲ ಸೇವೆ ನೀಡಿದೆ. ಕೆಂಪೇಗೌಡ ಬಸ್ ನಿಲ್ದಾಣ ನಿತಂತರ ಸೇವೆ ಮೂಲಕ 50 ವರ್ಷಗಳನ್ನು ಪೂರೈಸಿದೆ. ಸರಳವಾಗಿ ಬಸ್‌ನಲ್ಲಿ ಓಡಾಡಿ, ಇಲ್ಲಿವರೆಗೂ ಮುಟ್ಟಿರುವವರು ನಾವು. ಅತ್ಯಂತ ವಿಶ್ವಾಸ, ಜನಸೇವೆ ಮೂಲಕ ಸಂಸ್ಥೆ ಸೇವೆ ನೀಡಿದೆ ಎಂದರು.
ಕೆಎಸ್‌ಆರ್‌ಟಿಸಿ 60 ವರ್ಷದ ಸೇವೆ ನೀಡಿದ್ದು, ಡ್ರೈವರ್, ಕಂಡಕ್ಟರ್, ಮೆಕ್ಯಾನಿಕ್ ಸೇವೆ ಅಪಾರ. ಈ ಸಂಭ್ರಮವನ್ನು ಅವರ ಕುಟುಂಬಕ್ಕೆ ಅರ್ಪಿಸಬೇಕಿದೆ. ನೀವಿಲ್ಲದಿದ್ದರೆ ನಾವಿಲ್ಲವೆಂದು ಬಹಳ ಸಲ ಹೇಳಿದ್ದೇನೆ. ಅಪಘಾತ ಮಾಡದೆ ಚಿನ್ನದ ಪದಕ ಪಡೆಯುತ್ತಿದ್ದೀರಿ. ಸಣ್ಣ ಅಪಘಾತವನ್ನೂ ಮಾಡದೆ ಜಾಗೃತರಾಗಿ ಸೇವೆ ಸಲ್ಲಿಸಿದ್ದೀರಿ. ರಾತ್ರಿ, ಹಗಲು ಕಷ್ಟಪಟ್ಟು ಸಮಸ್ಯೆಗಳನ್ನು ಬದಿಗಿಟ್ಟು ನಿಮ್ಮ ಕೆಲಸ ನಿರ್ವಹಿಸಿದ್ದೀರಿ. ಈ ಹಿನ್ನೆಲೆ ಇಲಾಖೆ ಕುಟುಂಬದವರಿಗೆ ಇನ್ಶೂರೆನ್ಸ್ ಕೂಡ ಮಾಡಿಸಲಾಗ್ತಿದ್ದು ಈ ಮುಖಾಂತರ ಇನ್ಫೋಸಿಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.