ಮಂಡ್ಯ ಪೂಜಾರಿಗಳ ಹತ್ಯೆ ಪ್ರಕರಣ ; ಮೃತರಿಗೆ ತಲಾ ₹5 ಲಕ್ಷ ಪರಿಹಾರ- ಸಿಎಂ ಘೋಷಣೆ
ಪೂಜಾರಿಗಳ ಹತ್ಯೆ ಮಾಡಿ ಹುಂಡಿ ಕಳ್ಳತನ ಮಾಡಿದ ವಿಷಯ ತಿಳಿದು ಅತ್ಯಂತ ನೋವಾಗಿದೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು..
ಸಿಎಂ ಟ್ವೀಟ್
ಬೆಂಗಳೂರು :ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಗಣೇಶ್, ಪ್ರಕಾಶ್ ಮತ್ತು ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.