ಕರ್ನಾಟಕ

karnataka

ETV Bharat / state

4,989 ನಾಮಪತ್ರ ಕ್ರಮಬದ್ಧ; 500ಕ್ಕೂ ಹೆಚ್ಚು ತಿರಸ್ಕೃತ - karnataka assembly elections 2023

ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.

4989-nomination-papers-are-valid-for-karnataka-assembly-elections
ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾದ 4,989 ನಾಮಪತ್ರ ಕ್ರಮಬದ್ಧ : 500ಕ್ಕೂ ಹೆಚ್ಚು ನಾಮಪತ್ರ ತಿರಸ್ಕೃತ

By

Published : Apr 21, 2023, 10:54 PM IST

ಬೆಂಗಳೂರು :ರಾಜ್ಯ ವಿಧಾನಸಭೆ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ನಡೆದಿದ್ದು, 4,989 ನಾಮಪತ್ರಗಳು ಕ್ರಮಬದ್ಧವಾಗಿವೆ. ಸುಮಾರು 500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಾಗ 3,632 ಅಭ್ಯರ್ಥಿಗಳಿಂದ ಒಟ್ಟು 5,102 ಉಮೇದುವಾರಿಕೆ ಸಲ್ಲಿಕೆಯಾಗಿತ್ತು.

ಶುಕ್ರವಾರ ಬೆಳಗ್ಗೆಯಿಂದ ನಾಮಪತ್ರಗಳ ಪರಿಶೀಲನೆ ಕಾರ್ಯವು ರಾತ್ರಿವರೆಗೂ ನಡೆಯಿತು. ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಮೇದುವಾರಿಕೆ ಪರಿಶೀಲನೆ ಕಾರ್ಯವು ಇನ್ನೂ ಮುಗಿದಿಲ್ಲ. ಸವದತ್ತಿ-ಯಲ್ಲಮ್ಮ, ಔರಾದ್, ಹಾವೇರಿ, ರಾಯಚೂರು ಮತ್ತು ಶಿವಾಜಿನಗರ ಕ್ಷೇತ್ರದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯವು ಮುಂದುವರೆದಿದೆ. ಶನಿವಾರ ನಾಮಪತ್ರಗಳ ಕ್ರಮಬದ್ಧ ಸಂಖ್ಯೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

ಐದು ಕ್ಷೇತ್ರಗಳನ್ನು ಹೊರತುಪಡಿಸಿದರೆ 4,989 ನಾಮಪತ್ರಗಳು ಕ್ರಮಬದ್ದವಾಗಿವೆ. ಈ ಪೈಕಿ 4,607 ನಾಮಪತ್ರಗಳನ್ನು ಪುರುಷರು ಸಲ್ಲಿಸಿದ್ದು, ಮಹಿಳೆಯರಿಂದ 381 ನಾಮಪತ್ರ ಸಲ್ಲಿಸಿಕೆಯಾಗಿವೆ. ಇತರೆ ಒಂದು ನಾಮಪತ್ರ ಕ್ರಮಬದ್ಧವಾಗಿದೆ. ಬಿಜೆಪಿ 219, ಕಾಂಗ್ರೆಸ್ 218, ಜೆಡಿಎಸ್ 207, ಎಎಪಿ 207, ಬಿಎಸ್‌ಪಿ 135, ಸಿಪಿಐಎಂ 4, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳಿಂದ 720, ಪಕ್ಷೇತರರ 1334 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಇದನ್ನೂ ಓದಿ :ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡುತ್ತಿದ್ದೇವೆ: ಜೆ.ಪಿ.ನಡ್ಡಾ

ನಾಮಪತ್ರ ವಾಪಸ್ ತೆಗೆದುಕೊಳ್ಳಲು ಸೋಮವಾರ (ಏಪ್ರಿಲ್​ 24) ಅಂತಿಮ ದಿನವಾಗಿದೆ. ಉಮೇದುವಾರಿಕೆಗಳ ಹಿಂತೆಗೆತ ಕಾರ್ಯ ಪೂರ್ಣಗೊಂಡ ಬಳಿಕ ಚುನಾವಣಾ ಅಖಾಡದಲ್ಲಿ ಎಷ್ಟು ಹುರಿಯಾಳುಗಳು ಇದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಬಹಳಷ್ಟು ಮಂದಿ ನಾಮಪತ್ರಗಳನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಾಮಪತ್ರ ಹಿಂತೆಗೆತ ಬಳಿಕ ಚುನಾವಣಾ ಕಣದಲ್ಲಿರುವ ಅಧಿಕೃತ ಅಭ್ಯರ್ಥಿಗಳ ಸಂಖ್ಯೆ ಗೊತ್ತಾಗಲಿದೆ. ನಾಮಪತ್ರಗಳ ಹಿಂತೆಗೆತ ಬಳಿಕ ಚುನಾವಣಾ ಕಾವು ಮತ್ತಷ್ಟು ರಂಗೇರಲಿದೆ. ಮೇ 8 ರವರೆಗೆ ಭರ್ಜರಿ ರೋಡ್‌ ಶೋ, ಬೃಹತ್ ಸಮಾವೇಶ, ಮೆರವಣಿಗೆಗಳು ನಡೆಯಲಿದ್ದು, ಅಭ್ಯರ್ಥಿಗಳ ಪರ ರಾಜಕೀಯ ಪಕ್ಷಗಳ ಮುಖಂಡರು ಮತ ಯಾಚಿಸಲಿದ್ದಾರೆ.

ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದ ನಂತರ 3,632 ಅಭ್ಯರ್ಥಿಗಳಿಂದ ಒಟ್ಟು 5,102 ಉಮೇದುವಾರಿಕೆ ಸಲ್ಲಿಕೆಯಾಗಿವೆ. 3,327 ಪುರುಷ ಅಭ್ಯರ್ಥಿಗಳಿಂದ 4,710, ಮಹಿಳಾ ಅಭ್ಯರ್ಥಿಗಳು 304, 391 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಬ್ಬರು ಇತರರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ 707, ಕಾಂಗ್ರೆಸ್ 651, ಜೆಡಿಎಸ್ 455, ಎಎಪಿ 373, ಬಿಎಸ್‌ಪಿ 179, ಸಿಪಿಐಎಂ 5, ಎನ್‌ಪಿಪಿ 5 ನಾಮಪತ್ರಗಳನ್ನು ಸಲ್ಲಿಕೆಯಾಗಿದ್ದವು. ಇವುಗಳ ಪರಿಶೀಲನೆ ಬಳಿಕ ಅಖಾಡದಲ್ಲಿ ಉಳಿಯುವ ಅಭ್ಯರ್ಥಿಗಳ ನಿಖರ ಮಾಹಿತಿ ಸಿಗಲಿದೆ.

ಇದನ್ನೂ ಓದಿ :ಬೆಂಗಳೂರಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿರುವುದೆಷ್ಟು? ಪುರುಷರಿಗೆ ಸ್ಪರ್ಧೆಯೊಡ್ಡುವರೇ ವುಮನ್​​ ಕ್ಯಾಂಡಿಡೇಟ್ಸ್​​​​​​​!

ABOUT THE AUTHOR

...view details