ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ತೀವ್ರತೆ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ 490 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ, ಜೊತೆಗೆ ಹೊಸದಾಗಿ 47,930 ಮಂದಿಗೆ ಸೋಂಕು ದೃಢವಾಗಿದೆ.
ಇತ್ತ ಸಾವಿಗೀಡಾದವರ ಸಂಖ್ಯೆ 18,776ಕ್ಕೆ ಏರಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19,34,378ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,64,485ಕ್ಕೆ ಏರಿದೆ. ಅಲ್ಲದೇ ಇಂದು 31,796 ಮಂದಿ ಗುಣಮುಖರಾಗಿದ್ದು, ಈವರೆಗೆ 13,51,097 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 32.71% ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 1.02% ರಷ್ಟು ಇದೆ.