ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗಾಗಿ ನೈರುತ್ಯ ರೈಲ್ವೆ ವಿಭಾಗವೂ ಮೂರು ಜೋಡಿ ರೈಲುಗಳ ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಿದೆ.
ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಓಡಿಸಲು ಸಮಯವನ್ನ ಪಟ್ಟಿ ಮಾಡಲಾಗುತ್ತಿದೆ. ಇತ್ತ ಕೇವಲ 50 ನಿಮಿಷದೊಳಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಮೆಜೆಸ್ಟಿಕ್ ನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹಾಲ್ಟ್ ರೈಲು ನಿಲ್ದಾಣಕ್ಕೆ ಅಂದಾಜು 40 ನಿಮಿಷದೊಳಗೆ ತಲುಪಬಹುದು. ಅಲ್ಲಿಂದ ಶೆಟಲ್ ಬಸ್ ಮೂಲಕ 15 ನಿಮಿಷದೊಳಗೆ ವಿಮಾನ ನಿಲ್ದಾಣಕ್ಕೆ ತಲುಬಹುದು. ನೈರುತ್ಯ ರೈಲ್ವೆ ಹಾಗೂ ಬಿಐಎಎಲ್ ಸಹಯೋಗದೊಂದಿಗೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಹೆಚ್ಚು ಹಾಲ್ಟ್ ರೈಲು ನಿಲ್ದಾಣ ನಿರ್ಮಿಸಿದೆ.