ಬೆಂಗಳೂರು: ನೆರೆ ಹಾನಿ ಸಂಬಂಧ ತುರ್ತು ಪರಿಹಾರ ಕಾರ್ಯಗಳಿಗಾಗಿ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 200 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಜಿಲ್ಲೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ತುರ್ತಾಗಿ ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದರು. ಈ ಹಿನ್ನೆಲೆ ಸರ್ಕಾರ 200 ಕೋಟಿ ರೂಪಾಯಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮಳೆ ಹಾನಿ, ಎರಡು ತಿಂಗಳಲ್ಲಿ 70 ಜನ ಸಾವು: 2 ಹೆಚ್ಚುವರಿ ಎಸ್ಡಿಆರ್ಎಫ್ ತಂಡ ರಚನೆಗೆ ಸಿಎಂ ಸೂಚನೆ
ಬಳ್ಳಾರಿಗೆ 5 ಕೋಟಿ, ಚಿಕ್ಕಮಗಳೂರಿಗೆ 10 ಕೋಟಿ, ಚಿತ್ರದುರ್ಗಕ್ಕೆ 5 ಕೋಟಿ, ದ.ಕನ್ನಡಕ್ಕೆ 20 ಕೋಟಿ, ದಾವಣಗೆರೆಗೆ 15 ಕೋಟಿ, ಧಾರವಾಡಕ್ಕೆ 5 ಕೋಟಿ, ಗದಗಕ್ಕೆ 5 ಕೋಟಿ, ಹಾಸನಕ್ಕೆ 15 ಕೋಟಿ, ಹಾವೇರಿಗೆ 5 ಕೋಟಿ, ಕೊಪ್ಪಳಕ್ಕೆ 10 ಕೋಟಿ, ಮಂಡ್ಯಕ್ಕೆ 10 ಕೋಟಿ, ರಾಯಚೂರಿಗೆ 10 ಕೋಟಿ, ಶಿವಮೊಗ್ಗಕ್ಕೆ 10 ಕೋಟಿ, ತುಮಕೂರಿಗೆ 10 ಕೋಟಿ, ಉಡುಪಿಗೆ 15 ಕೋಟಿ, ಉ.ಕನ್ನಡಕ್ಕೆ 10 ಕೋಟಿ, ವಿಜಯನಗರಕ್ಕೆ 5 ಕೋಟಿ, ಮೈಸೂರಿಗೆ 15 ಕೋಟಿ, ಚಾಮರಾಜನಗರಕ್ಕೆ 5 ಕೋಟಿ, ಕೋಲಾರಕ್ಕೆ 5 ಕೋಟಿ, ಚಿಕ್ಕಬಳ್ಳಾಪುರಕ್ಕೆ 10 ಕೋಟಿ ಬಿಡುಗಡೆ ಮಾಡಲಾಗಿದೆ.