ಕರ್ನಾಟಕ

karnataka

By

Published : Nov 9, 2020, 9:21 PM IST

ETV Bharat / state

ಕರ್ನಾಟಕದಲ್ಲಿ ಮತ್ತೊಮ್ಮೆ ಇಳಿಕೆಯತ್ತ ಕೊರೊನಾ ಸೋಂಕಿತರ ಸಂಖ್ಯೆ; 1,963 ಜನರಿಗೆ ಸೋಂಕು ದೃಢ

ಇಂದು ರಾಜ್ಯದಲ್ಲಿ 1,963 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,48,850ಕ್ಕೆ ಏರಿಕೆ ಆಗಿದೆ.

Corona
ಕೊರೊನಾ

ಬೆಂಗಳೂರು: ಕರ್ನಾಟಕದಲ್ಲಿ ತಜ್ಞರ ಹೇಳಿಕೆಯಂತೆ ಮತ್ತೊಮ್ಮೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯತ್ತ ಸಾಗುತ್ತಿದೆ. ಕಳೆದೊಂದು ವಾರದಿಂದ 2-3 ಸಾವಿರದೊಳಗೆ ಬರುತ್ತಿದ್ದ ಸೋಂಕಿತರ ಸಂಖ್ಯೆ ಇಂದು 1,963ಕ್ಕೆ ಇಳಿದಿದೆ.

ಇಂದು 1,963 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,48,850ಕ್ಕೆ ಏರಿಕೆ ಆಗಿದೆ. ಇಂದು 19 ಮಂದಿ ಕೋವಿಡೇತರ ಖಾಯಿಲೆಗೆ ಬಲಿಯಾಗಿದ್ದು, ಕೊರೊನಾದಿಂದ ಒಟ್ಟು ಮೃತಪಟ್ಟಿರುವವರ ಸಂಖ್ಯೆ 11,410ಕ್ಕೆ ಏರಿಕೆ ಆಗಿದೆ. 2,686 ಮಂದಿ ಡಿಸ್ಜಾರ್ಜ್ ಆಗಿದ್ದು 8,04,485 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳು 32,936 ಇದ್ದು 876 ಸೋಂಕಿತರು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ 544 ಜನರು ತಪಾಸಣೆಗೆ ಒಳಪಟ್ಟಿದ್ದಾರೆ. ಕಳೆದ 7 ದಿನಗಳಲ್ಲಿ 43,007 ಜನ ಹೋಂ ಕ್ವಾರೆಂಟೈನಲ್ಲಿದ್ದಾರೆ.

ABOUT THE AUTHOR

...view details