ಬೆಂಗಳೂರು:ಶಾಲಾ ಬಸ್ ಡಿಕ್ಕಿ ಹೊಡೆದು 16 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಾರೋಹಳ್ಳಿ ನಿವಾಸಿ ಕೀರ್ತನಾ ಮೃತ ದುರ್ದೈವಿ. ನಗರದ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಅವಘಡ ಸಂಭವಿಸಿದೆ.
ಬೆಂಗಳೂರು: ಶಾಲಾ ಬಸ್ ಡಿಕ್ಕಿಯಾಗಿ ಬಾಲಕಿ ಸಾವು - girl dies in bus accident
ನಗರದ ದೇವೇಗೌಡ ಪೆಟ್ರೋಲ್ ಬಂಕ್ ಸಮೀಪ ಈ ದುರ್ಘಟನೆ ಸಂಭವಿಸಿದೆ.
16-year-old girl dies after school bus accident in Bengaluru
ಬೈಕ್ನಲ್ಲಿ ಹರ್ಷಿತಾ, ದರ್ಶನ್ ಮತ್ತು ಕೀರ್ತನಾ ಟ್ರಿಪಲ್ ರೈಡ್ ಹೋಗುತ್ತಿದ್ದರು. ಆಗ ಹಿಂಬದಿಯಿಂದ ಬಂದ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕೀರ್ತನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಬನಶಂಕರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.