ಕರ್ನಾಟಕ

karnataka

ETV Bharat / state

ಕೇಂದ್ರ ಅನುದಾನ ವಿತರಣೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ!: ಕೃಷ್ಣಬೈರೇಗೌಡ ಸರಣಿ ಟ್ವೀಟ್​

ಹಣಕಾಸು ವಿಚಾರದಲ್ಲಿ ಸಚಿವ ಕೃಷ್ಣಬೈರೇಗೌಡ ಸರಣಿ ಟ್ವೀಟ್​ ಮಾಡಿದ್ದಾರೆ. ಆರ್ಥಿಕವಾಗಿ ಬೆಂಗಳೂರು ಪ್ರಬಲವಾಗಿರಬಹುದು. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವು ಭಾಗಗಳು ಇನ್ನೂ ಬಡತನದಲ್ಲಿವೆ. ಈ ಭಾಗಗಳ ಅಭಿವೃದ್ದಿಗೆ ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇದೆ. 15ನೇ ಹಣಕಾಸು ಆಯೋಗದ ಅನುದಾನ ವಿತರಣೆ ಕರ್ನಾಟಕಕ್ಕೆ ಸಾಲದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೃಷ್ಣಭೈರೇಗೌಡ ಸರಣಿ ಟ್ವೀಟ್​

By

Published : Jun 26, 2019, 3:28 PM IST

Updated : Jun 26, 2019, 3:49 PM IST

ಬೆಂಗಳೂರು: ಹಣಕಾಸು ವಿಚಾರದಲ್ಲಿ ಸಚಿವ ಕೃಷ್ಣಭೈರೇಗೌಡ ಸರಣಿ ಟ್ವೀಟ್ ಮಾಡಿದ್ದಾರೆ. ಆರ್ಥಿಕವಾಗಿ ಬೆಂಗಳೂರು ಪ್ರಬಲವಾಗಿರಬಹುದು. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಲವು ಭಾಗಗಳು ಇನ್ನೂ ಬಡತನದಲ್ಲಿವೆ. ಈ ಭಾಗಗಳ ಅಭಿವೃದ್ದಿಗೆ ದೊಡ್ಡ ಪ್ರಮಾಣದ ಅನುದಾನದ ಅವಶ್ಯಕತೆ ಇದೆ. 15ನೇ ಹಣಕಾಸು ಆಯೋಗದ ಅನುದಾನ ವಿತರಣೆ ಕರ್ನಾಟಕಕ್ಕೆ ಸಾಲದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರದ ಅನುದಾನ ವಿತರಣೆಯಿಂದ ರಾಜ್ಯದ ಅಭಿವೃದ್ಧಿ ತೀವ್ರ ಕಷ್ಟ. 15ನೇ ಹಣಕಾಸು ಆಯೋಗದ ವಿತರಣೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿದೆ. 15-20 ರ ಹಣಕಾಸು ಪಂಚವಾರ್ಷಿಕ ಯೋಜನೆಯಲ್ಲಿ ಕರ್ನಾಟಕಕ್ಕೆ ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿ ಕೇವಲ 1,527 ಕೋಟಿ ರೂ ನೀಡಿದ್ದಾರೆ. ಆದರೆ, ಮಹಾರಾಷ್ಟ್ರಕ್ಕೆ 8,190 ಕೋಟಿ ಅನುದಾನ ಎಫ್​ಡಿಆರ್​ಎಫ್ ಫಂಡ್​ನಲ್ಲಿ ದೊರೆತಿದೆ. 15 ನೇ ಹಣಕಾಸು ಆಯೋಗದಲ್ಲಿ ಆಗಿರುವ ಈ ಅನ್ಯಾಯ ಸರಿಪಡಿಸಿ ನ್ಯಾಯಯುತ ಪರಿಹಾರ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಹೇಳಿದ್ದೇವೆ ಎಂದು ಟ್ವಿಟರ್​ನಲ್ಲಿ ವಿವರಿಸಿದ್ದಾರೆ.

Last Updated : Jun 26, 2019, 3:49 PM IST

ABOUT THE AUTHOR

...view details