ಕರ್ನಾಟಕ

karnataka

ETV Bharat / state

ಸ್ಯಾನ್‌ಫ್ರಾನ್ಸಿಸ್ಕೊ, ಹಾಂಕಾಂಗ್​ನಿಂದ ಬೆಂಗಳೂರಿಗೆ ಬಂದಿಳಿದ 157 ಪ್ರಯಾಣಿಕರು - ಹಾಂಕಾಂಗ್​ನಿಂದ ಬೆಂಗಳೂರಿಗೆ ಬಂದಿಳಿದ 157 ಪ್ರಯಾಣಿಕರು,

ಸ್ಯಾನ್‌ಫ್ರಾನ್ಸಿಸ್ಕೊ, ಹಾಂಕಾಂಗ್​ನಿಂದ ಸುಮಾರು 157 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದಾರೆ.

157 passengers arrived to Bangalore, 157 passengers arrived to Bangalore from San Francisco, 157 passengers arrived to Bangalore from Hong Kong, ಬೆಂಗಳೂರಿಗೆ ಬಂದಿಳಿದ 157 ಪ್ರಯಾಣಿಕರು, ಹಾಂಕಾಂಗ್​ನಿಂದ ಬೆಂಗಳೂರಿಗೆ ಬಂದಿಳಿದ 157 ಪ್ರಯಾಣಿಕರು, ಸ್ಯಾನ್‌ಫ್ರಾನ್ಸಿಸ್ಕೊನಿಂದ ಬೆಂಗಳೂರಿಗೆ ಬಂದಿಳಿದ 157 ಪ್ರಯಾಣಿಕರು,
ಬೆಂಗಳೂರಿಗೆ ಬಂದಿಳಿದ 157 ಪ್ರಯಾಣಿಕರು

By

Published : Jun 19, 2020, 6:58 AM IST

ದೇದೇವನಹಳ್ಳಿ:ಕೊರೊನಾದಿಂದಾಗಿ ವಿದೇಶಗಳಲ್ಲಿ ಸಿಲುಕಿದ್ಧ ಕನ್ನಡಿಗರು ಸ್ವದೇಶಕ್ಕೆ ವಾಪಸ್​ ಆಗಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಹಾಂಕಾಂಗ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 157 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೊದಿಂದ ನಿನ್ನೆ ರಾತ್ರಿ 7.45 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾ ವಿಮಾನ ಆಗಮಿಸಿತ್ತು. ಇದರಲ್ಲಿ 52 ಪುರುಷರು, 47 ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 101 ಮಂದಿ ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದರು.

ಚೀನಾದ ಹಾಂಕಾಂಗ್‌ನಿಂದ ನಿನ್ನೆ ರಾತ್ರಿ 10.00 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ 42 ಪುರುಷರು, 14 ಮಹಿಳೆಯರು ಸೇರಿದಂತೆ ಒಟ್ಟು 56 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ.

ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ವೈರಾಣು ಸೋಂಕಿನ ಲಕ್ಷಣಗಳು ಕಂಡು ಬಂದಿರುವುದಿಲ್ಲ. ಎಲ್ಲ ಪ್ರಯಾಣಿಕರನ್ನು ಕ್ವಾರಂಟೈನ್​ಗೆ ಕಳುಹಿಸಿಕೊಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ABOUT THE AUTHOR

...view details