ಬೆಂಗಳೂರು:ರಾಜಧಾನಿಯಲ್ಲಿಂದು 1,447 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 15,329ಕ್ಕೆ ಏರಿಕೆಯಾಗಿದೆ. ಇಂದು 29 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.
ಬೆಂಗಳೂರು: ಸೋಂಕು ಹೆಚ್ಚಿರುವ ವಾರ್ಡ್‌ಗಳ ಸೀಲ್ಡೌನ್ ವಿಸ್ತರಿಸಲು ಚಿಂತನೆ!
ನಗರದ ಕೆಲ ವಲಯದ ವಾರ್ಡ್ಗಳಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳಿದ್ದು, ಆ ವಾರ್ಡ್ ಗಳ ಸೀಲ್ಡೌನ್ ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸಲು ಚಿಂತಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈವರೆಗೆ 206 ಮಂದಿಯನ್ನು ಕೋವಿಡ್ ಬಲಿ ತೆಗೆದುಕೊಂಡಿದೆ. ಇಂದು 601 ಮಂದಿ ಗುಣಮುಖರಾಗಿದ್ದು, ಈವರೆಗೆ 3,435 ಮಂದಿ ಬಿಡುಗಡೆಯಾಗಿದ್ದಾರೆ. 11,687 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿರುವವರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.
ಅತಿಹೆಚ್ಚು ಕೊರೊನಾ ಪ್ರಕರಣ ಇರುವ ವಾರ್ಡ್
*ಬಿಟಿಎಂ ಲೇಔಟ್
*ಜಕ್ಕಸಂದ್ರ
*ವಿಜಯನಗರ
*ಬಸವನಗುಡಿ
*ಶಾಂತಲಾನಗರ
*ಚಾಮರಾಜಪೇಟೆ
*ಸಂಪಿಗೆ ನಗರ
*ಜಯನಗರ
*ಚಿಕ್ಕಪೇಟೆ
*ಪಟ್ಟಾಭಿರಾಮನಗರ
*ಹೊಂಬೇಗೌಡ ನಗರ
*ಸದ್ದುಗುಂಟೆ ಪಾಳ್ಯ
*ಆರ್ ಆರ್ ನಗರ
*ವಿವಿಪುರಂ
*ಕೆ.ಆರ್ ಮಾರುಕಟ್ಟೆ
ಈ ವಾರ್ಡ್ಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಂಪೂರ್ಣ ಇಳಿಮುುಖ ಆಗುವವರೆಗೂ ಸೀಲ್ಡೌನ್ ಮುಂದುವರಿಯುವ ಸಾಧ್ಯತೆ ಇದೆ.