ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 1,213 ಮಂದಿಗೆ COVID Positive: 25 ಮಂದಿ ಕೊರೊನಾಕ್ಕೆ ಬಲಿ - ಕರ್ನಾಟಕ ಕೋವಿಡ್ ರಿಪೋರ್ಟ್​

ರಾಜ್ಯದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳ ಸಂಖ್ಯೆ 19,300 ಇದೆ. ಈವರೆಗೆ ಒಟ್ಟು 28,86,906 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1213-people-tested-covid-positive-in-karnataka
ರಾಜ್ಯದಲ್ಲಿ 1,213 ಮಂದಿಗೆ ಕೋವಿಡ್ ಪಾಸಿಟಿವ್

By

Published : Aug 26, 2021, 7:24 PM IST

ಬೆಂಗಳೂರು: ರಾಜ್ಯದಲ್ಲಿಂದು 1,213 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.‌ 25 ಜನರು ಸೋಂಕಿನಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇಂದು 1,206 ಮಂದಿ ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 19,300 ಇದೆ. ಈವರೆಗೆ ಒಟ್ಟು 28,86,906 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 29,43,463ಕ್ಕೆ ತಲುಪಿದೆ. ಮೃತಪಟ್ಟವರ ಸಂಖ್ಯೆ 37,231ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 319 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ 7,343 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಮೃತಪಡುತ್ತಿರುವವರ ಪ್ರಮಾಣ ಶೇ. 2.06 ಹಾಗೂ ಸೋಂಕಿತರ ಪ್ರಮಾಣ ಶೇ. 0.64ರಷ್ಟಿದೆ.

ಇದನ್ನೂ ಒದಿ:Mysore Gang rape ಪ್ರಕರಣಕ್ಕೆ ಪೊಲೀಸರ ತಲೆದಂಡ?

ABOUT THE AUTHOR

...view details