ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರ ಆಸ್ಕರ್ ಗ್ರ್ಯಾಮಿ ಪದಕವು ಕೊರಿಯರ್ ಕಂಪನಿಗೆ ಸೂಕ್ತ ದಾಖಲೆಗಳನ್ನು ಒದಗಿಸದ ಕಾರಣ ಕಳೆದೆರಡು ತಿಂಗಳಿಂದ ಕಸ್ಟಮ್ಸ್ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇದೀಗ ಅಧಿಕಾರಿಗಳ ಸಹಾಯದಿಂದ ಮತ್ತೆ ಪದಕ ರಿಕಿ ಕೇಜ್ ಕೈಸೇರಿದೆ.
ಅಮೆರಿಕದ ಲಾಸ್ ವೇಗಾಸ್ನಲ್ಲಿ ನಡೆದ 64ನೇ ಆವೃತ್ತಿಯಲ್ಲಿ ಬೆಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಆಸ್ಕರ್ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಈ ಪ್ರಶಸ್ತಿಯ ಭಾಗವಾಗಿ ಕೊಡುವ ಪದಕವನ್ನು ಅಮೆರಿಕದ ಪ್ರಸಿದ್ಧ ಆಭರಣ ಕಂಪನಿ ಟಿಫಾನಿ ಚಿನ್ನದಿಂದ ತಯಾರಿಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಫೆಡ್‌ಎಕ್ಸ್ ಕೊರಿಯರ್ ಎಜೆನ್ಸಿ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ಕಳುಹಿಸಲಾಗಿತ್ತು. ಆದರೆ ಇದಕ್ಕೆ ಪೂರಕವಾದ ದಾಖಲೆಗಳನ್ನು ಫೆಡ್ ಎಕ್ಸ್ ಕೊಟ್ಟಿರಲಿಲ್ಲ.