ನೆಲಮಂಗಲ(ಬೆಂಗಳೂರು):ಆಂಬ್ಯುಲೆನ್ಸ್ವೊಂದು ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನೆಲಮಂಗಲದ ರಾಯನ್ ನಗರದ ಬಳಿ ನಡೆದಿದೆ.
ನೆಲಮಂಗಲ: ಕಾರಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್; ಮೂವರು ಗಂಭೀರ - nelamangala accident
ನೆಲಮಂಗಲದ ರಾಯನ್ ನಗರದ ಬಳಿ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಕಾರಿಗೆ ಡಿಕ್ಕಿ ಹೊಡೆದು ಮೂವರ ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನಲ್ಲಿ ಆಕ್ಸಿಡೆಂಟ್
ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ವೇಗವಾಗಿ ಬಂದು ಕಾರಿಗೆ ಗುದ್ದಿದ್ದಾನೆ. ಕಾರು ಮೂರು ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ನಂತರ ಚಾಲಕ ಆಂಬ್ಯುಲೆನ್ಸ್ ಸಮೇತ ನಾಪತ್ತೆಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿಯ ಬರ್ಬರ ಕೊಲೆ
Last Updated : Jun 12, 2022, 12:19 PM IST