ಬೆಂಗಳೂರು:ಬೀಗ ಹಾಕಿರುವ ಬ್ಯಾಚುಲರ್ ಮನೆಗಳನ್ನೇ ಗುರಿಯಾಗಿಸಿಕೊಂಡು ಸೇಲ್ಸ್ ಎಕ್ಸಿಕ್ಯೂಟಿವ್ ಸೋಗಿನಲ್ಲಿ ಬಂದು ಲ್ಯಾಪ್ ಟಾಪ್ ಕಳ್ಳತನ ಮಾಡಿರುವ ಘಟನೆ ಹೆಚ್ ಎಸ್ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ಯಾಚ್ಯುಲರ್ ಯುವಕರ ರೂಮ್ ಗಳೇ ಇವನ ಟಾರ್ಗೆಟ್.. ಟಿಪ್ ಟಾಪಾಗಿ ಬಂದು ಲ್ಯಾಪ್ಟಾಪ್ ಹೊತ್ತೊಯ್ದ ಖದೀಮ
ಕಳ್ಳನೋರ್ವ ಸೇಲ್ಸ್ ಎಕ್ಸಿಕ್ಯೂಟಿವ್ ಸೋಗಿನಲ್ಲಿ ಮನೆಯೊಂದಕ್ಕೆ ಬಂದು ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಳಗ್ಗೆ ಏಳರಿಂದ ಎಂಟು ಗಂಟೆಯನ್ನೇ ಕಳ್ಳತನದ ಸಮಯವಾಗಿ ಮಾಡಿಕೊಂಡ ಖದೀಮ ರೂಮಲ್ಲಿ ಯಾರೇ ಮಲಗಿದರೂ ಸದ್ದು ಗದ್ದಲವಿಲ್ಲದೆ ಕೈಗೆ ಸಿಕ್ಕ ವಸ್ತುಗಳು ಕಳ್ಳತನ ಮಾಡುತ್ತಿದ್ದ. ನೀಟಾಗಿ ಡ್ರೆಸ್ ಮಾಡಿಕೊಂಡು ಸಾಫ್ಟ್ ವೇರ್ ಉದ್ಯೋಗಿ ತರಹ ಓಡಾಡುವ ಈತ ಯಾರಾದರೂ ಕೇಳಿದರೆ ಸೇಲ್ಸ್ ಎಕ್ಸ್ ಕ್ಯೂಟಿವ್ ಮ್ಯಾನೇಜರ್ ಎಂದೇಳಿ ನಕಲಿ ಐಡಿ ಕಾರ್ಡ್ ತೋರಿಸುತ್ತಿದ್ದ. ಯಾರಿಗೂ ಅನುಮಾನ ಬರದಂತೆ ರೂಮಿಗೆ ನುಗ್ಗಿ ಲ್ಯಾಪ್ ಟಾಪ್, ಮೊಬೈಲ್, ದುಡ್ಡು ದೋಚುತ್ತಿದ್ದ.
ರವಿಕಾಂತ್ ಎಂಬುವರು ರೂಮ್ ಗೆ ಬೀಗ ಹಾಕದೆ ಕೆಲಸದ ಸಲುವಾಗಿ ಹೊರ ಹೋಗಿದನ್ನು ಕಂಡ ಕಳ್ಳ ನೇರವಾಗಿ ಮನೆಗೆ ಎಂಟ್ರಿ ಕೊಟ್ಟು ರೂಮಿನಲ್ಲಿದ್ದ ಲ್ಯಾಪ್ ಟಾಪ್ ಮತ್ತು ಡೆಬಿಟ್ ಕಾರ್ಡ್ ಕದ್ದಿದ್ದಾನೆ. ಇದೇ ರೀತಿ ಪಕ್ಕದ ಮನೆಯಲ್ಲೂ ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡಿದ್ದ. ಈ ಸಂಬಂಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗೆ ಬಲೆ ಬೀಸಿದ್ದಾರೆ.