ಕರ್ನಾಟಕ

karnataka

ETV Bharat / state

ಮನೆ ಬಾಗಿಲಿಗೆ ಚಿಳಕ ಹಾಕಿ ಕೊಟ್ಟಿಗೆಯಲ್ಲಿದ್ದ 20 ಕುರಿ ಕಳ್ಳತನ! - ಕಳ್ಳತನ

ಸುಬ್ರಮಣಿ ಎಂಬುವವರ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳ್ಳರು ಕದ್ದಿದ್ದಾರೆ.

ಕೊಟ್ಟಿಗೆಯಲ್ಲಿದ್ದ 20 ಕುರಿಗಳ ಕಳ್ಳತನ
ಕೊಟ್ಟಿಗೆಯಲ್ಲಿದ್ದ 20 ಕುರಿಗಳ ಕಳ್ಳತನ

By

Published : Oct 28, 2022, 5:31 PM IST

ದೊಡ್ಡಬಳ್ಳಾಪುರ:ಮನೆ ಬಾಗಿಲಿಗೆ ಹೊರಗಿನಿಂದ ಚಿಳಕ ಹಾಕಿದ ಕಳ್ಳರು ಕೊಟ್ಟಿಗೆಯಲ್ಲಿದ್ದ 20 ಕುರಿ, ಮೇಕೆಗಳನ್ನು ಕದ್ದು ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ.

ಗ್ರಾಮದ ಜಿಕೆವಿಕೆ ಬಳಿಯ ಹೊಲದಲ್ಲಿ ಸುಬ್ರಮಣಿ ಎಂಬವರು ಮನೆ ಕಟ್ಟಿಕೊಂಡು ಅಲ್ಲಿಯೇ ವಾಸವಾಗಿದ್ದಾರೆ. ವ್ಯವಸಾಯದ ಜೊತೆಗೆ ಕುರಿ, ಮೇಕೆಗಳನ್ನು ಸಾಕುತ್ತಿದ್ದರು. ಕಳೆದ ರಾತ್ರಿ ಇವರ ಮನೆಗೆ ಹೊರಗಿನಿಂದ ಚಿಳಕ ಹಾಕಿದ ಖದೀಮರು ಕೊಟ್ಟಿಗೆಯಲ್ಲಿದ್ದ ಕುರಿ ಮೇಕೆಗಳನ್ನು ಕದ್ದೊಯ್ದಿದ್ದಾರೆ.

ಸಣ್ಣ ಮರಿಗಳನ್ನು ಬಿಟ್ಟು ದೊಡ್ಡ ಕುರಿ, ಮೇಕೆಗಳನ್ನು ಕದ್ದು ಕಾಲ್ಕಿತ್ತಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾವೇರಿ: ಯುಗಾದಿ ಹಬ್ಬದಂದೇ ದೊಡ್ಡಿಯಿಂದ 15 ಕುರಿ ಕಳ್ಳತನ

ABOUT THE AUTHOR

...view details