ಕರ್ನಾಟಕ

karnataka

ETV Bharat / state

ಬ್ಯಾಂಕ್‌ಗೆ ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿದ ಮುಸುಕುಧಾರಿಗಳು - ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ

ದೊಡ್ಡಬಳ್ಳಾಪುರ ಸಮೀಪದ ಜಿ. ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಭಾನುವಾರ(ನ.26) ಮಧ್ಯರಾತ್ರಿ ನುಗ್ಗಿದ ಮುಸುಕುಧಾರಿಗಳ ತಂಡ 14 ಲಕ್ಷ ನಗದು ಹಾಗೂ 3.5 ಕೋಟಿ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Theft in Doddaballapur Karnataka Gramin Bank
ಬ್ಯಾಂಕ್‌ಗೆ ನುಗ್ಗಿ ಚಿನ್ನಾಭರಣ ದೋಚಿದ ಮುಸುಕುಧಾರಿಗಳು

By

Published : Dec 2, 2022, 10:46 AM IST

Updated : Dec 2, 2022, 10:55 AM IST

ದೊಡ್ಡಬಳ್ಳಾಪುರ: ಗ್ಯಾಸ್ ಕಟರ್ ಮೂಲಕ ಬ್ಯಾಂಕ್ ಒಳನುಗ್ಗಿರುವ ಕಳ್ಳರು ಅಂದಾಜು 3.5 ಕೋಟಿ ರೂ ಮೌಲ್ಯದ ಚಿನ್ನಾಭರಣ ಮತ್ತು 14 ಲಕ್ಷ ನಗದು ಹಣ ದೋಚಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ಜಿ.ಹೊಸಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್​​ನಲ್ಲಿ ನವೆಂಬರ್ 26 ರ ಮುಂಜಾನೆ 1:30ರ ಸುಮಾರಿಗೆ ಘಟನೆ ನಡೆದಿದೆ.

ಬ್ಯಾಂಕ್‌ಗೆ ನುಗ್ಗಿ ಚಿನ್ನಾಭರಣ ದೋಚಿದ ಮುಸುಕುಧಾರಿಗಳು: ಸಿಸಿಟಿವಿ ದೃಶ್ಯ

ರೈತರು ಅಡವಿಟ್ಟಿದ್ದ 3.5 ಕೋಟಿ ರೂ ಮೌಲ್ಯದ 5 ಕೆ.ಜಿ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಖದೀಮರು ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರುತು ಸಿಗದಂತೆ ಮುಖಕ್ಕೆ ಮುಸುಕು ಧರಿಸಿರುವ ಮೂವರು ಕಳ್ಳರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಪಟಾಕಿ ವ್ಯಾಪಾರಿ ಅಡ್ಡಗಟ್ಟಿ ₹20 ಲಕ್ಷ ದರೋಡೆ: ಐವರ ಬಂಧನ

Last Updated : Dec 2, 2022, 10:55 AM IST

ABOUT THE AUTHOR

...view details