ಆನೇಕಲ್: ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ವೈಖರಿ ಜನಸಾಮಾನ್ಯರಿಗೂ ವಾಕರಿಕೆ ಬರುವಂತೆ ಮಾಡಿದೆ. ಸ್ಥಳೀಯ ರಾಜಕೀಯ ಪಕ್ಷ ಜೆಡಿಎಸ್ ತನ್ನ ಪಕ್ಷದ ಜನಪ್ರತಿನಿಧಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಿದ್ದೇ ಈ ರಾಜಕೀಯ ಹೊಲಸು ವ್ಯವಸ್ಥೆಗೆ ಕಾರಣವಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ ನಾರಾಯಣಸ್ವಾಮಿ ತಿಳಿಸಿದ್ದಾರೆ.
ದೇಶದ ಜನತೆಗೆ ಕರ್ನಾಟಕದ ರಾಜಕಾರಣ ವಾಕರಿಕೆ ತರಿಸಿದೆ: ಎ. ನಾರಾಯಣಸ್ವಾಮಿ - undefined
ಸಮ್ಮಿಶ್ರ ಸರ್ಕಾರದ ಆಡಳಿತ ನಮ್ಮ ರಾಜ್ಯದ ಜನತೆಗೆ ಮಾತ್ರವಲ್ಲ, ಇಡೀ ದೇಶದ ಜನತೆಗೆ ವಾಕರಿಕೆ ತರಿಸುತ್ತಿದೆ ಎಂದು ನಾರಾಯಣಸ್ವಾಮಿ ಗುಡುಗಿದ್ದಾರೆ.
ಮಾಯಸಂದ್ರದಲ್ಲಿ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದ್ದು ಭೂತ್ ಮಟ್ಟದ ಬಿಜೆಪಿ ಕಾರ್ಯಕರ್ತರು. ಹೀಗಾಗಿ ಅವರ ಋಣ ತೀರಿಸಲು ಇಡೀ ಜೀವಮಾನ ಸಾಲದು. ಆದ್ದರಿಂದ ಪಕ್ಷದ ಕಾರ್ಯಕರ್ತರು ಸದಸ್ಯತ್ವವನ್ನು ಆದ್ಯತೆ ಮೇರೆಗೆ ಮಾಡಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಬೇಕು ಹಾಗು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ವರ್ಷದಲ್ಲಿ ಅತೀ ಹೆಚ್ಚು ಆನೇಕಲ್ ಜನತೆಗೆ ಲಭ್ಯವಿರುವುದಾಗಿ ಸಂಸದರು ಜನತೆಗೆ ಮಾತು ನೀಡಿದರು.
ಜೆಡಿಎಸ್ ಪಕ್ಷ, ತನ್ನ ಕುಟುಂಬದ ಬೆಳೆವಣಿಗೆಗೆ ಬಳಸಿಕೊಂಡ ಆಸೆ ಬುರಕತನವೇ ಸರ್ಕಾರ ಅಸ್ಥಿರಗೊಳ್ಳಲು ಸಾಧ್ಯವಾಗಿದೆ. ಮಗ ನಿಖಿಲ್ ಸೋತಾಗ, ತಂದೆ ಮಾಜಿ ಪ್ರಧಾನಿ ದೇವೇಗೌಡರು ಸೋತಾಗ, ಮೊನ್ನೆ ಇಡೀ ಜನತೆ ಬಿಜೆಪಿ ಪರ ಮತ ಚಲಾಯಿಸಿ ಗೆಲ್ಲಿಸಿದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೆ, ಅಥವಾ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರೇ ರಾಜೀನಾಮೆ ಘೋಷಿಸಿದಾಗ ಅಧಿಕಾರ ಲಾಲಸೆ ಬಿಡಬೇಕಿತ್ತು ಎಂದು ತಿಳಿಸಿದರು. ಇದನ್ನು ಮರೆತು ಬಿಜೆಪಿಗರ ಕಡೆ ಬೆರಳು ತೋರಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.