ಕರ್ನಾಟಕ

karnataka

ETV Bharat / state

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ಯತ್ನ: ವಿಡಿಯೋ - ನಟ ವಿಜಯ್ ಸೇತುಪತಿ

ತಮಿಳಿನ ಜನಪ್ರಿಯ ನಟ ವಿಜಯ್‌ ಸೇತುಪತಿ ಮೇಲೆ ಕುಡಿದ ಮತ್ತಿನಲ್ಲಿದ್ದ ಎನ್ನಲಾದ ಪ್ರಯಾಣಿಕನೊಬ್ಬ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನಟ ವಿಜಯ್ ಸೇತುಪತಿ ಮೇಲೆ ಪ್ರಯಾಣಿಕನಿಂದ ಹಲ್ಲೆಗೆ ಯತ್ನ
ನಟ ವಿಜಯ್ ಸೇತುಪತಿ ಮೇಲೆ ಪ್ರಯಾಣಿಕನಿಂದ ಹಲ್ಲೆಗೆ ಯತ್ನ

By

Published : Nov 3, 2021, 8:21 PM IST

ದೇವನಹಳ್ಳಿ:ಚೆನ್ನೈಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿ ಮೇಲೆ ಪ್ರಯಾಣಿಕನೊಬ್ಬ ಏಕಾಏಕಿ ಬಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.


ವಿವರ:

ಚೆನ್ನೈಯಿಂದ ಕಳೆದ ರಾತ್ರಿ(ಮಂಗಳವಾರ) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಜಯ್ ಸೇತುಪತಿ ಸಿಐಎಸ್​​ಎಫ್ ಸಿಬ್ಬಂದಿಯ ಬಂದೋಬಸ್ತ್‌ನಲ್ಲಿ ಆರೈವಲ್‌ ಬಳಿ ಹೋಗುವಾಗ ಏಕಾಏಕಿ ಬಂದ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯಿಂದ ಕೆಲಕಾಲ ಏರ್‌ಪೋರ್ಟ್‌ನಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಹಲ್ಲೆ ನಡೆಸಿದ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎನ್ನಲಾಗುತ್ತಿದೆ. ಆರೋಪಿ ಪ್ರಯಾಣಿಕ ನಟ ವಿಜಯ್ ಸೇತುಪತಿಯ ಮೇಲೆ ಹಲ್ಲೆಗೆ ಮುಂದಾದನಾ? ಅಥವಾ ಈ ಸಮಯದಲ್ಲಿ ಅವರ ಪಿಎ ಅಡ್ಡ ಬಂದಾಗ ಅವರ ಹಲ್ಲೆ ಮಾಡಿದನಾ? ಎಂಬ ಬಗ್ಗೆ ಅನುಮಾನವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ಇದೇ ವೇಳೆ, ಹಲ್ಲೆ ಮಾಡಿದ ಪ್ರಯಾಣಿಕ ಯಾರು? ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಲು ಕಾರಣವೇನು? ಎನ್ನುವುದು ಪೊಲೀಸರ ತನಿಖೆಯ ನಂತರ ಗೊತ್ತಾಗಬೇಕು.

For All Latest Updates

ABOUT THE AUTHOR

...view details