ದೊಡ್ಡಬಳ್ಳಾಪುರ: ಮೂಢನಂಬಿಕೆಗಳ ವಿರುದ್ಧ ದಾಖಲೆ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ನೀಡಿ ಮನೆಮಾತಾಗಿರುವ ಹುಲಿಕಲ್ ನಟರಾಜ್ ಅವರಿಗೆ ಈಗ ಯೂಟ್ಯೂಬ್ ಕೂಡ ಬೆಳ್ಳಿ ಪದಕ ನೀಡಿ ಗೌರವಿಸಿದೆ.
ಹುಲಿಕಲ್ ನಟರಾಜ್ಗೆ ಯೂಟ್ಯೂಬ್ನಿಂದ ಬೆಳ್ಳಿ ಪದಕ - Miracle breaker hulikal nataraj
ಮೂಢನಂಬಿಕೆಗಳ ವಿರುದ್ಧ ದಾಖಲೆ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ನೀಡಿ ಮನೆಮಾತಾಗಿರುವ ಹುಲಿಕಲ್ ನಟರಾಜ್ ಅವರಿಗೆ ಈಗ ಯೂಟ್ಯೂಬ್ ಕೂಡ ಬೆಳ್ಳಿ ಪದಕ ನೀಡಿ ಗೌರವಿಸಿದೆ.
ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಹಲವು ವರ್ಷಗಳಿಂದ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದವರಾದ ಹುಲಿಕಲ್ ನಟರಾಜ್ ವೈಚಾರಿಕ ಚಿಂತಕರಾಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಪವಾಡಗಳನ್ನು ಬಯಲು ಮಾಡುವ ಮೂಲಕ ಮೌಢ್ಯತೆಗಳನ್ನು ತೋರಿಸುವಲ್ಲಿ ದಾಖಲೆಮಟ್ಟದ ಕಾರ್ಯಕ್ರಮಗಳನ್ನು ನೀಡಿ ಖ್ಯಾತಿ ಗಳಿಸಿದ್ದಾರೆ.
ಅವರ ಜನಜಾಗೃತಿಯ ಕಾರ್ಯಕ್ರಮ ಎಲ್ಲರಿಗೂ ತಲುಪಲಿ ಎಂಬ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಯ್ಯುಟ್ಯೂಬ್ನಲ್ಲಿ ಹುಲಿಕಲ್ ನಟರಾಜ್ ಹೆಸರಿನಲ್ಲಿ ಚಾನೆಲ್ ತೆರೆದಿದ್ದರು. ಇಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಮೌಢ್ಯದ ವಿರುದ್ಧ ವಿಡಿಯೋ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಇವರ ವಿಡಿಯೋಗಳನ್ನ ಈಗಾಗಲೇ ಒಂದು ಕೋಟಿಗೂ ಅಧಿಕ ಜನ ನೋಡಿದ್ದಾರೆ. ಕಡಿಮೆ ಕಾಲಾವಧಿಯಲ್ಲಿ 1,80,000 ಜನ ಇವರ ಯೂಟ್ಯೂಬ್ ಚಾನಲ್ಗೆ ಸಬ್ಸ್ಕ್ರೈಬ್ ಆಗಿರುವುದು ಹೆಗ್ಗಳಿಕೆ. ಇವರ ವಿಡಿಯೋಗಳನ್ನ 14 ರಾಷ್ಟ್ರಗಳ ಜನ ವೀಕ್ಷಣೆ ಮಾಡಿದ್ದು, ಪ್ರತಿದಿನ ಎರಡು ಸಾವಿರ ಮಂದಿ ಸಬ್ಸ್ಕ್ರೈಬ್ ಆಗುತ್ತಿದ್ದಾರೆ. ಈ ಕಾರಣದಿಂದ ಯುಟ್ಯೂಬ್ ಸಂಸ್ಥೆ ಹುಲಿಕಲ್ ನಟರಾಜ್ ಅವರ ಮನೆ ಬಾಗಿಲಿಗೆ ಬೆಳ್ಳಿ ಪದಕ ನೀಡಿ ಗೌರವಿಸಿದೆ. ಇವರ ಸಾಧನೆಗೆ ಹಿತೈಷಿಗಳು ಶುಭ ಕೋರಿದ್ದಾರೆ.