ಕರ್ನಾಟಕ

karnataka

ETV Bharat / state

ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾರ್ಟ್ ​​ಸರ್ಕ್ಯೂಟ್, ತಪ್ಪಿದ ಅವಘಡ - devanahalli government hospital

ದೇವನಹಳ್ಳಿಯ (Devanahalli) ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದೆ.

short circuit in devanahalli government hospital
ಆಸ್ಪತ್ರೆಯಲ್ಲಿ ಶಾರ್ಟ್​​ಸರ್ಕ್ಯೂಟ್

By

Published : Nov 18, 2021, 9:02 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಆರೋಗ್ಯ ಸಿಬ್ಬಂದಿ ತೋರಿದ ಮುನ್ನೆಚ್ಚರಿಕೆ ಕ್ರಮದಿಂದ ಅವಘಡ ತಪ್ಪಿದೆ.


ಆಸ್ಪತ್ರೆಯಲ್ಲಿ ಇದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿದ್ದನ್ನು ಸಿಬ್ಬಂದಿ ಗಮನಿಸಿ ಜಾಗ್ರತೆ ವಹಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಅಗ್ನಿಶಮನಕಾರಿ ಪ್ರಯೋಗಿಸಿ ಆಗಬೇಕಿದ್ದ ಅವಘಡ ತಪ್ಪಿಸಿದ್ದಾರೆ.

ಒಂದು ವೇಳೆ ಇಡೀ ಆಸ್ಪತ್ರೆ ಕಟ್ಟಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ಗೆ ತುತ್ತಾಗಿದ್ದಾರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು.

ಇದನ್ನೂ ಓದಿ:ಆನೇಕಲ್‌: ಕಾಲೇಜು ಯುವತಿಯನ್ನು ಕೊಂದು ಯುವಕ ನೇಣಿಗೆ ಶರಣು

ABOUT THE AUTHOR

...view details