ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅವರನ್ನು 14 ವರ್ಷದ ಬಾಲಕ ಭೇಟಿಯಾಗಿ ತಾನು ಪೊಲೀಸ್ ಆಗಬೇಕು ಎಂದಿದ್ದ ಮಹದಾಸೆಯನ್ನು ವ್ಯಕ್ತಪಡಿಸಿದ್ದಾನೆ. ಈ ಹಿನ್ನೆಲೆ ಅವರು ಆತನನ್ನು ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾರ್ಗದರ್ಶನ ನೀಡಿದರು.
ಬಾಲಕನ ಪೊಲೀಸ್ ಕನಸಿಗೆ ನೀರೆರೆದ ಎಸ್ಪಿ ರವಿ ಡಿ. ಚನ್ನಣ್ಣನವರ್
ಪೊಲೀಸ್ ಇಲಾಖೆಯ ಖಡಕ್ ಅಧಿಕಾರಿಗಳಲ್ಲಿ ಒಬ್ಬರಾದ ರವಿ ಡಿ. ಚನ್ನಣ್ಣನವರ್ ಯುವಕರ ಐಕಾನ್ ಆಗಿದ್ದಾರೆ. ಸದ್ಯ ಅವರು ಇಲಾಖೆ ಸೇರಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ವೇಳೆ ಪೊಲೀಸ್ ಆಗಬೇಕೆಂಬ ಮಹದಾಸೆ ವ್ಯಕ್ತಪಡಿಸಿದ ಬಾಲಕನನ್ನು ತಮ್ಮೊಂದಿಗೆ ಅಪರಾಧ ನಡೆದ ಸ್ಥಳಗಳಿಗೆ ಕರೆದೊಯ್ದು ಮಾರ್ಗದರ್ಶನ ಮಾಡಿದ್ದಾರೆ.
ಪೊಲೀಸ್ ಇಲಾಖೆಯ ಖಡಕ್ ಅಧಿಕಾರಿಗಳಲ್ಲಿ ಒಬ್ಬರಾದ ಚನ್ನಣ್ಣನವರ್ ಯುವಕರ ಐಕಾನ್ ಆಗಿದ್ದಾರೆ. ಸಾಕಷ್ಟು ಯುವಕರು ಪೊಲೀಸ್ ಇಲಾಖೆ ಸೇರಲು ರವಿ ಡಿ. ಚನ್ನಣ್ಣನವರ್ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲ್ಲ. ಸದ್ಯ ಅವರು ಇಲಾಖೆ ಸೇರಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.
ಚನ್ನಣ್ಣನವರ್ ಅವರನ್ನು ಭೇಟಿಯಾಗಿ ತನ್ನ ಮನದ ಇಂಗಿತ ಹಂಚಿಕೊಂಡ 14 ವರ್ಷದ ಬಾಲಕ ರೋಹಿತ್, ಭವಿಷ್ಯದಲ್ಲಿ ತಾನು ಪೊಲೀಸ್ ಆಗಬೇಕೆಂಬ ಹೆಬ್ಬಯಕೆಯನ್ನು ವ್ಯಕ್ತಪಡಿಸಿದ. ಇದನ್ನು ಕಂಡು ಮೆಚ್ಚಿದ ಚನ್ನಣ್ಣನವರ್ ಆತನನ್ನು ಪ್ರೋತ್ಸಾಹಿಸಲು ಮಾರ್ಗದರ್ಶನ ಮಾಡುವ ಸಲುವಾಗಿ ತಮ್ಮ ಜೊತೆಯಲ್ಲಿ ಅಪರಾಧ ನಡೆದ ಸ್ಥಳಗಳಿಗೆ ಕರೆದುಕೊಂಡು ಹೋದರು. ಈ ವೇಳೆ ಅವರು, ಪೊಲೀಸರಿಗೆ ಎದುರಾಗುವ ಸವಾಲುಗಳೇನು?, ಅವುಗಳನ್ನು ಮೆಟ್ಟಿ ನಿಂತು ಅಪರಾಧ ಪ್ರಕರಣಗಳನ್ನು ಭೇದಿಸುವುದು ಹೇಗೆ?. ಹಾಗೂ ಇಂತಹ ಸಮಯದಲ್ಲಿ ಪೊಲೀಸರ ಕರ್ತವ್ಯನಿಷ್ಠೆ ಬಗ್ಗೆ ವಿವರಿಸಿದರು. ಎಸ್ಪಿ ಚನ್ನಣ್ಣವರ್ ಬಾಲಕನ ಆಸೆಗೆ ನೀರೆರೆದು ಪ್ರೋತ್ಸಾಹಿಸಿದ ರವಿ ಡಿ. ಚನ್ನಣ್ಣನವರ್ ಅವರ ಕೆಲಸ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.