ನೆಲಮಂಗಲ: ಬಂಧಿತ ಆರೋಪಿಯನ್ನು ಮಾತನಾಡಿಸಲು ಬಂದ ಕರವೇ ಸಂಘಟನೆಯ ಉಪಾಧ್ಯಕ್ಷನಿಗೆ ಪಿಎಸ್ಐ ಕಪಾಳ ಮೋಕ್ಷ ಮಾಡಿರುವ ಆರೋಪ ಕೇಳಿ ಬಂದಿದ್ದು, ಸಂಘಟನೆಯ ಕಾರ್ಯಕರ್ತರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೇಶ್ ಮತ್ತು ರಂಗಸ್ವಾಮಿಯವರನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಮಾತನಾಡಿಸಲು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಠಾಣೆಗೆ ಬಂದಿದ್ದಾರೆ. ಅನುಮತಿ ಇಲ್ಲದೆ ಬಂಧಿತರನ್ನು ಮಾತನಾಡಿಸಿದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉಮೇಶ್ ಗೌಡ ಮತ್ತು ಪಿಎಸ್‌ಐ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪಿಎಸ್ಐ ಸುರೇಶ್, ಉಮೇಶ್ ಗೌಡನಿಗೆ ಕಪಾಳ ಮೋಕ್ಷ ಮಾಡಿದ್ದರೆಂದು ಆರೋಪಿಸಲಾಗಿದೆ.