ಆನೇಕಲ್:ದೇಶದಲ್ಲಿ ಸಾಮಾನ್ಯ ಸರಕು ಸಾಗಣೆ ವಾಹನ ಚಾಲಕರಿಗೆ ಹೊರೆಯಾಗಿರುವ ಮೋಟಾರು ವಾಹನ ಕಾಯ್ದೆ ವಿರುದ್ದ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಸಿಐಟಿಯು ಆನೇಕಲ್ ತಾಲೂಕು ಸಮಿತಿಯಿಂದ ಬೆಂಗಳೂರು-ಹೊಸೂರು ಹೆದ್ದಾರಿ ಚಂದಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.
ಮೋಟಾರು ವಾಹನ ಕಾಯ್ದೆ ವಿರುದ್ಧ ಆನೇಕಲ್‌ನಲ್ಲಿ ಆಟೋಚಾಲಕರಿಂದ ಪ್ರತಿಭಟನೆ..
ಸುರಕ್ಷತಾ ರಸ್ತೆ ನಿಯಮ ಪಾಲಿಸಿದರೂ ಸಂಚಾರಿ ಪೊಲೀಸರು ದುಬಾರಿ ದಂಡ ಹಾಕುತ್ತಿರುವುದು ವಾಹನ ಸವಾರರನ್ನು ದಿಕ್ಕು ತೋಚದಂತೆ ಮಾಡಿದೆ. ಹೀಗಾಗಿ ಇಂದು ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಮುತ್ತಾನಲ್ಲೂರು ಸೇರಿದಂತೆ ಸಣ್ಣ ವಾಹನ ಹಾಗೂ ಆಟೋ ಚಾಲಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.
ವಾಹನ ವಿಮೆಗೆ 3000 ರೂ. ಆರ್ಟಿಒ ಕೆಲಸಗಳಿಗೆ 200 ರಿಂದ 300 ರೂ. ಹೆಚ್ಚಳ, ಜಿಎಸ್ಟಿ, ನಿರುದ್ಯೋಗ, ಆಹಾರ ಪದಾರ್ಥಗಳ ಬೆಲೆ ಏರಿಕೆ ಮನೆ ಬಾಡಿಗೆ, ವಿದ್ಯಾಭ್ಯಾಸ, ಆರೋಗ್ಯ ನಿರ್ವಹಣೆ ವಿಷಮವಾಗುತ್ತಿರುವ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಮೋಟಾರು ಕಾಯ್ದೆ ಹೇರಿಕೆ ವಿರುದ್ಧ ಪ್ರತಿಭಟನೆ ನಡಸಲಾಗಿದೆ.
ಅಲ್ಲದೆ ಸುರಕ್ಷತಾ ರಸ್ತೆ ನಿಯಮ ಪಾಲಿಸಿದರೂ ಸಂಚಾರಿ ಪೊಲೀಸರು ದುಬಾರಿ ದಂಡ ಹಾಕುತ್ತಿರುವುದು ವಾಹನ ಸವಾರರನ್ನು ದಿಕ್ಕು ತೋಚದಂತೆ ಮಾಡಿದೆ. ಹೀಗಾಗಿ ಇಂದು ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಮುತ್ತಾನಲ್ಲೂರು ಸೇರಿ ಸಣ್ಣ ವಾಹನ ಹಾಗೂ ಆಟೋ ಚಾಲಕರು ಮಾನವ ಸರಪಳಿ ನಿರ್ಮಿಸಿ ಹೋರಾಟ ಮಾಡುವ ಮೂಲಕ ಆನೇಕಲ್ ಉಪವಿಭಾಗದ ಡಿವೈಎಸ್ಪಿ ನಂಜುಂಡೇಗೌಡರಿಗೆ ಮನವಿ ಪತ್ರವನ್ನು ನೀಡಿ ಸರ್ಕಾರಕ್ಕೆ ತಲುಪಿಸುವಂತೆ ಕೋರಿದ್ದಾರೆ.