ಕರ್ನಾಟಕ

karnataka

By

Published : Dec 20, 2022, 6:10 PM IST

ETV Bharat / state

ದೇವನಹಳ್ಳಿ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಕೆ.ಹೆಚ್. ಮುನಿಯಪ್ಪ ಸ್ಪರ್ಧೆ ವದಂತಿ.. ಮಾಜಿ ಶಾಸಕ ಹೇಳಿದ್ದೇನು?

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

pillamunishamappa react
ಪಿಳ್ಳಮುನಿಶ್ಯಾಮಪ್ಪ ಪ್ರತಿಕ್ರಿಯೆ

ಪಿಳ್ಳಮುನಿಶ್ಯಾಮಪ್ಪ ಪ್ರತಿಕ್ರಿಯೆ

ದೊಡ್ಡಬಳ್ಳಾಪುರ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೇಂದ್ರದ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಸ್ಪರ್ಧಿಸುವ ವದಂತಿ ಹರಿದಾಡುತ್ತಿದೆ. ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ, ಪ್ರತಿಸ್ಪರ್ಧಿಯಾಗಿ ಯಾರೇ ಕಣದಲ್ಲಿದ್ದರು ಸ್ವಾಗತಿಸುವುದಾಗಿ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಕೆ ಹೆಚ್​​ ಮುನಿಯಪ್ಪ ದೇವನಹಳ್ಳಿ ಸ್ಫರ್ಧೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಸ್ಪರ್ಧಿಯಾಗಿ ಯಾರೇ ಇಲ್ಲಿಗೆ ಬಂದರು ಅವರನ್ನು ಸ್ವಾಗತಿಸುವುದಾಗಿ ಹೇಳಿದರು. ಅಲ್ಲದೇ ಅವರು ಇಲ್ಲಿಗೆ ಬಂದರೂ ಕಾಂಗ್ರೆಸ್​​ ಪಕ್ಷದಿಂದ ಸ್ಫರ್ಧಿಸುತ್ತಾರೆ ಎಂದರು.

ಇನ್ನು, ಬಿಜೆಪಿಯಿಂದ ಅಧಿಕೃತವಾಗಿ ಯಾರನ್ನು ಅಭ್ಯರ್ಥಿಯನ್ನಾಗಿ ಆದೇಶ ಮಾಡುತ್ತದೋ ಅವರಿಗೆ ಟಿಕೆಟ್​ ಸಿಗಲಿದೆ. ಬಿಜೆಪಿಗೆ ಸೇರುವ ಮುನ್ನವೇ ಇದನ್ನು ತಿಳಿದು ನಾನು ಬಂದಿದ್ದು, ಈ ವಿಚಾರದಲ್ಲಿ ನಾನು ಪಾಸಿಟಿವ್​ ಆಗಿದ್ದೇನೆ ಎಂದರು. ಪಿಳ್ಳ ಮುನಿಶ್ಯಾಮಪ್ಪ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದರು.

2018 ರಲ್ಲಿ ಜೆಡಿಎಸ್​ನಿಂದ ಟಿಕೆಟ್ ಸಿಗದ ಹಿನ್ನೆಲೆ ಚುನಾವಣೆಯಿಂದ ದೂರ ಉಳಿದಿದ್ದ ಅವರು 8 ತಿಂಗಳ ಹಿಂದೆ ಬಿಜೆಪಿ ಪಕ್ಷ ಸೇರಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಚುನಾವಣಾ ಪ್ರಚಾರ ಸಹ ಅವರು ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ನೌಕರರ ನೂತನ ಪಿಂಚಣಿ ವ್ಯವಸ್ಥೆ ಕುರಿತು ಸದನದಲ್ಲಿ ಚರ್ಚಿಸಿದ ಬಳಿಕ ತೀರ್ಮಾನ : ಸಿಎಂ ಬೊಮ್ಮಾಯಿ

ABOUT THE AUTHOR

...view details