ದೊಡ್ಡಬಳ್ಳಾಪುರ:ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದ್ದು, ವ್ಯಾಕ್ಸಿನ್ಗಾಗಿ ಲಸಿಕೆ ಕೇಂದ್ರಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಕೊರತೆಯಿಂದ ನೋ ಸ್ಟಾಕ್ ಬೋರ್ಡ್ ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯಾಕ್ಸಿನ್ಗೆ ಮುಗಿಬಿದ್ದ ಜನರು: ನೋ ಸ್ಟಾಕ್ ಬೋರ್ಡ್ ನೋಡಿ ಆಕ್ರೋಶ - ದೊಡ್ಡಬಳ್ಳಾಪುರದಲ್ಲಿ ವ್ಯಾಕ್ಸಿನೇಷನ್
ಕೊರೊನಾ ಮೂರನೇ ಅಲೆಯ ಆತಂಕ ಎದುರಾದ ಹಿನ್ನೆಲೆ ಜನರು ಕೊರೊನಾ ಲಸಿಕೆ ಪಡೆಯಲು ಧಾವಿಸಿದ್ದು, ವ್ಯಾಕ್ಸಿನ್ ನೋ ಸ್ಟಾಕ್ ಬೋರ್ಡ್ ನೋಡಿ ಆಕ್ರೋಶ ಹೊರಹಾಕಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಕೇರಳದಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭವಾಗಿದ್ದು, ರಾಜ್ಯಕ್ಕೂ ವ್ಯಾಪಿಸುವ ಆತಂಕವನ್ನುಂಟು ಮಾಡಿದೆ. ಇದರಿಂದ ವ್ಯಾಕ್ಸಿನ್ಗಾಗಿ ಜನ ಲಸಿಕೆ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ.
ದೊಡ್ಡಬಳ್ಳಾಪುರ ಲಸಿಕೆ ಕೇಂದ್ರದಲ್ಲೂ ಸಹ ವೃದ್ಧರು ಮಹಿಳೆಯರು ಸೇರಿದಂತೆ ಜನ್ರು ಬೆಳಗಿನಿಂದ ಕ್ಯೂನಲ್ಲಿ ನಿಂತಿದ್ರು. ಆದ್ರೆ ಕೇವಲ 30 ಜನರಿಗೆ ಲಸಿಕೆ ನೀಡಿ ಇದೀಗ ವ್ಯಾಕ್ಸಿನ್ ಇಲ್ಲ ಅನ್ನುತ್ತಿದ್ದಾರೆ. ಗೇಟ್ಗೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ವ್ಯಾಕ್ಸಿನ್ಗಾಗಿ ಬಂದ ಜನರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳಕ್ಕೆ ಮುಂದಾಗಿದ್ದು, ಲಸಿಕೆ ಬರುವವರೆಗೂ ರಸ್ತೆಯಲ್ಲೇ ಕೂರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.