ದೇವನಹಳ್ಳಿ(ಬೆಂ.ಗ್ರಾ): ಚೀನಾ, ಜಪಾನ್ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಕೊರೊನಾ ಉಲ್ಬಣಿಸಿದೆ. ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಆಗಮಿಸುತ್ತಿರುವ ಶೇಕಡಾ 2ರಷ್ಟು ಪ್ರಯಾಣಿಕರ ತಪಾಸಣೆ ಮತ್ತು ಗಂಟಲು ದ್ರವ ಸಂಗ್ರಹಣೆಯ ಸ್ಯಾಂಪಲ್ಸ್ಗಳನ್ನು ಲ್ಯಾಬ್ಗೆ ಕಳಿಸಲಾಗುತ್ತಿದೆ.
ಏರ್ಪೋರ್ಟ್ನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಪಾಳಿಯಲ್ಲಿ ಇಬ್ಬರು ಲ್ಯಾಬ್ ಟೆಕ್ನಿಷಿಯನ್ಸ್ ಮತ್ತು ಒಬ್ಬರು ಆಪರೇಟರ್ನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸ್ಯಾಂಪಲ್ಸ್ಗಳ ಸಂಗ್ರಹಣೆ ಹೆಚ್ಚು ಮಾಡಲಿದ್ದೇವೆ. ಸದ್ಯ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಕೆ ವಿಜೇಂದ್ರ ಮಾಹಿತಿ ನೀಡಿದರು.