ಕರ್ನಾಟಕ

karnataka

By

Published : Oct 31, 2019, 10:39 PM IST

ETV Bharat / state

ಕಾಂಗ್ರೆಸ್ ಇತಿಹಾಸದಲ್ಲೇ ದೇಶದ ಪರವಾಗಿ ಮಾತನಾಡಿಲ್ಲ: ಎಸ್.ಆರ್.ವಿಶ್ವನಾಥ್

ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ.‌ ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತು ಯಾವುದನ್ನು‌ ತೆಗೆಯಬೇಕು ಅನ್ನೋದರ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಚನೆ ಮಾಡಿರುವ ಕಮಿಟಿ ತಿಳಿಸುತ್ತೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ. ಇನ್ನು, ಕಾಂಗ್ರೆಸ್​ ಪಕ್ಷ ಇತಿಹಾಸದಲ್ಲೇ ದೇಶದ ಪರವಾಗಿ ಮಾತನಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್.ಆರ್.ವಿಶ್ವನಾಥ್

ಬೆಂಗಳೂರು:ಕಾಂಗ್ರೆಸ್​ನವರು ದಾವೂದ್ ಇಬ್ರಾಹಿಂ ಪರ, ಪಾಕಿಸ್ತಾನ ಪರವಾಗಿ ಹೇಳಿಕೆ ಕೊಡುತ್ತಾರೆ. ಅಲ್ಲದೆ ನಮ್ಮ ಸೈನಿಕರ ವಿರುದ್ಧ ಹೇಳಿಕೆ ನೀಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಅವರು ದೇಶದ ಪರವಾಗಿ ಮಾತನಾಡಿರುವುದು ಬಹಳ ಕಡಿಮೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್. ಆರ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಎಸ್.ಆರ್. ವಿಶ್ವನಾಥ್, ಶಾಸಕ

ಯಲಹಂಕ ತಾಲೂಕು ಕಚೇರಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಣೆ ಮಾಡುವುದಿಲ್ಲ.‌ ಪಠ್ಯ ಪುಸ್ತಕದಲ್ಲಿ ಟಿಪ್ಪು ಕುರಿತು ಯಾವುದನ್ನು‌ ತೆಗೆಯಬೇಕು ಅನ್ನೋದರ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ರಚನೆ ಮಾಡಿರುವ ಸಮಿತಿ ತಿಳಿಸುತ್ತೆ. ಅದರ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇನ್ನು ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ನಮ್ಮ ಪಕ್ಷವೇ ಟಿಪ್ಪು ಜಯಂತಿ ಆಚರಿಸದಿರಲು ತೀರ್ಮಾನ ತೆಗೆದುಕೊಂಡಿದೆ. ಶರತ್ ಬಚ್ಚೇಗೌಡ ತಮ್ಮ ನಿಲುವನ್ನು ಬದಲಿಸಿಕೊಳ್ಳದಿದ್ದರೆ​ ಅವರ ವಿರುದ್ಧ ಪಕ್ಷದಿಂದ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಬಚ್ಚೇಗೌಡರ ಪುತ್ರ ಹೊಸಕೋಟೆ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅಂತಿದ್ದಾರೆ. ಹೊಸಕೋಟೆ ರಾಜಕೀಯನೇ ಜಿದ್ದಾಜಿದ್ದಿನ ರಾಜಕಾರಣ. ಸಹಜವಾಗಿ ವಿರೋಧಿಸಿಕೊಂಡು ಬಂದವರ ಜೊತೆ ಕೈಜೋಡಿಸಬೇಕು ಎಂಬುದು ಇರುತ್ತೆ. ಬಹುಶಃ ಅದು ಸರಿ ಹೋಗಬಹುದು ಎಂದು ಅಭಿಪ್ರಾಯಪಟ್ಟರು.

ಟಿಪ್ಪು ಜಯಂತಿ ಆಚರಣೆಯನ್ನ ಜಾರಿಗೆ ತಂದಿದ್ದು ನಮ್ಮ ಸರ್ಕಾರ ಅಲ್ಲ. ಕಳೆದ ಸರ್ಕಾರ ಮಾಡಿರೋದು.. ಟಿಪ್ಪುವಿನ ಇತಿಹಾಸ ಒಂದು ಮುಖವನ್ನು ನೋಡಿದ್ದೇವೆ.. ಇನ್ನೊಂದು ಚರಿತ್ರೆಯನ್ನು ಬಹಳಷ್ಟು ಜನ ಅನುಭವಿಸಿರೋರು. ವಿಶೇಷವಾಗಿ ಕೊಡಗು, ಕೇರಳ ಬಾಗದ ಜನರು, ಮೈಸೂರು ಸಂಸ್ಥಾನದ ಜನರಿಗೆ ಕಿರುಕುಳವನ್ನು ಅನುಭವಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರಿಂದ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳ್ತಾರೆ. ಟಿಪ್ಪು ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿತ್ತು. ಮೈಸೂರು ರಾಜರನ್ನು ಸಂಹರಿಸಿ ಅಧಿಕಾರವನ್ನು ಯಾವ ರೀತಿ ಪಡೆದುಕೊಂಡರು ಅನ್ನೋದನ್ನು ಇತಿಹಾಸದಲ್ಲಿ ಹೇಳುವುದಕ್ಕೆ ಹೋಗಿಲ್ಲ.‌ ಅವನೊಬ್ಬ ಮತಾಂಧ, ಬಹಳ ಕ್ರೂರಿ ಅನ್ನೋದು ಇತಿಹಾಸ ಪುಟದಲ್ಲಿದೆ ಎಂದು ಶಾಸಕ ವಿಶ್ವನಾಥ್​ ಕಿಡಿಕಾರಿದರು.

ಇನ್ನು ನಾಡಪ್ರಭು ಕೆಂಪೇಗೌಡ ಅವರ ಹಳೆ ಬೆಂಗಳೂರಿಗೆ ರಾಜಧಾನಿಯಾಗಿದ್ದ ಯಲಹಂಕ, ತಾಲೂಕು ಕೇಂದ್ರವಾದ ಬಳಿಕ ಮೊದಲ ಬಾರಿಗೆ ಕನ್ನಡಪರ ಸಂಘಟನೆಗಳು, ತಾಲೂಕು ಆಡಳಿತ, ಬಿಬಿಎಂಪಿ ವತಿಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ. ತಾಲೂಕಿನಲ್ಲಿ ಸುದೀರ್ಘವಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿರುವ ಗಣ್ಯರಿಗೆ ಯಲಹಂಕ ರತ್ನ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು ಎಂದು ಶಾಸಕ ಎಸ್. ಆರ್. ವಿಶ್ವನಾಥ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details